ಶಿವಮೊಗ್ಗದಲ್ಲಿ 5 ಕಿ.ಮೀ ಮ್ಯಾರಥಾನ್ ಓಟ! ಡೇಟ್ ಮಾರ್ಕ್​ ಮಾಡ್ಕೊಳ್ಳಿ, ಮಾಹಿತಿ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
Shivamogga Police Organizes 5KM Marathon

Shivamogga Police Organizes 5KM Marathon / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಸಿಟಿಯಲ್ಲಿ ಆಗಾಗ ವಿಶೇಷ ಮ್ಯಾರಥಾನ್​ಗಳು ಆಯೋಜನೆಗೊಳ್ಳುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಮ್ಯಾರಥಾನ್ ಆಯೋಜನೆ ಆಗಿರಲಿಲ್ಲ. ಹಾಗಾಗಿ ಮ್ಯಾರಥಾನ್​ನಲ್ಲಿ ರನ್ ಮಾಡುವ ಆಸಕ್ತರಿಗೆ ನಿರಾಸೆಯಾಗಿತ್ತು. ಇದೀಗ ಮ್ಯಾರಥಾನ್​ ಕುರಿತಾದ ಗುಡ್​ನ್ಯೂಸ್​ವೊಂದು ಹೊರಬಿದ್ದಿದೆ. ಶಿವಮೊಗ್ಗ ಪೊಲೀಸ್ ಇಲಾಖೆಯೇ ಮ್ಯಾರಥಾನ್ ಒಂದನ್ನ ಆಯೋಜಿಸಿದೆ. ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಅಂತರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯ ಅಂಗವಾಗಿ ಇದೇ ಜೂನ್ 25, 2026 ರಂದು ನಗರದಲ್ಲಿ 5 ಕಿಲೋಮೀಟರ್ ಉದ್ದದ ಬೃಹತ್ ಮ್ಯಾರಥಾನ್ ಓಟವನ್ನು ಆಯೋಜಿಸಿದೆ.

ಮ್ಯಾರಥಾನ್​ನ ಪ್ರಮುಖ ಪಾಯಿಂಟ್ಸ್​

  • ಅಂದು ಮುಂಜಾನೆ ಸರಿಯಾಗಿ 6.00 ಗಂಟೆಗೆ ಶಿವಮೊಗ್ಗ ನಗರದ ಡಿ.ಎ.ಆರ್. ಕವಾಯತು ಮೈದಾನದಿಂದ ಈ ಬೃಹತ್ ಮ್ಯಾರಥಾನ್ ಓಟ ಸ್ಟಾರ್ಟ್​ ಆಗಲಿದೆ.
  • ಮಾದಕ ವಸ್ತುಗಳಿಗೆ ಇಲ್ಲ ಎನ್ನಿ ಹಾಗೂ ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಓಟ ಎಂಬ ಪ್ರಮುಖ ಘೋಷವಾಕ್ಯಗಳೊಂದಿಗೆ ಈ ಜಾಗೃತಿ ಓಟ ಸಾಗಲಿದೆ
  • ಪ್ರತಿಯೊಬ್ಬ ನಾಗರಿಕರು ಹಾಗೂ ಯುವಕರು ಈ ಓಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಹಾಗೂ ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಹಾಗೂ ಸೇವನೆಯ ವಿರುದ್ಧದ ಅಭಿಯಾನಕ್ಕೆ ಕೈಜೋಡಿಸಿ, ಅರಿವು ಮೂಡಿಸಬೇಕು ಎಂಬ ಥೀಮ್​ನಡಿಯಲ್ಲಿ ಮ್ಯಾರಥಾನ್ ಸಾಗಲಿದೆ

ಮ್ಯಾರಥಾನ್ ಡಿ.ಎ.ಆರ್. ಮೈದಾನದಿಂದ ಆರಂಭವಾಗಿ ನಗರದ ಪ್ರಮುಖ ವೃತ್ತಗಳಾದ ಅಶೋಕ ವೃತ್ತ, ಎ.ಎ. ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ ಹಾಗೂ ಐ.ಬಿ. ವೃತ್ತದ ಮುಖಾಂತರ ಸಾಗಿ ಅಂತಿಮವಾಗಿ ಮರಳಿ ಡಿ.ಎ.ಆರ್. ಮೈದಾನವನ್ನು ತಲುಪಲಿದೆ.

ಈ ಬಗ್ಗೆ ಸ್ವತಃ ಎಸ್​ಪಿ ನಿಖಿಲ್​ ಬಿ ತಮ್ಮ ಅಧಿಕೃತ ಎಸ್​ಪಿ ಶಿವಮೊಗ್ಗ ಎಕ್ಸ್​ ಅಕೌಂಟ್​ನಲ್ಲಿ ಮ್ಯಾರಥಾನ್​ ಓಟದ ಪೋಸ್ಟರ್ ಹಂಚಿಕೊಂಡು, ನಾಗರಿಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor