ನಿನ್ನೆಯಿಂದಲೇ ಓಪನ್​ ಆಗುತ್ತಿಲ್ಲ ಟೆಲಿಗ್ರಾಂ! ಜೂನ್ 22 ವರೆಗೂ ಬಂದ್.. ಇದೆ ಬಿಗ್​ ಕಾರಣ!

Telegram ban /ಮಲೆನಾಡು ಟುಡೆ ಸುದ್ದಿ / ಜೂನ್ 21ರಂದು ನಡೆಯಲಿರುವ ನೀಟ್ ಮರುಪರೀಕ್ಷೆಯಲ್ಲಿ ಯಾವೊಂದು ಅಕ್ರಮವಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾಋ ಜೂನ್ 22ರವರೆಗೆ ಟೆಲಿಗ್ರಾಂ ಮೆಸೆಂಜರ್ ಆ್ಯಪ್‌ಗೆ ನಿಷೇಧ ಹೇರಿದೆ. ಹಾಗಾಗಿ ಈ ಆಪ್ ಎಲ್ಲಿಯು ಓಪನ್ ಆಗುತ್ತಿಲ್ಲ. ಕಳೆದ ಮೇ 3ರಂದು ನಡೆದ ಪರೀಕ್ಷೆ ವೇಳೆ ಟೆಲಿಗ್ರಾಂ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಹಿನ್ನೆಲೆಯಲ್ಲಿ ನೀಟ್ ಮರು ಪರೀಕ್ಷೆಯಲ್ಲೂ ಅಂತಹ ವಂಚನೆಯನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್ ಮತ್ತುಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಆದೇಶ ಹೊರಡಿಸಿದೆ. ಅಲ್ಲದೆ, ಜೂನ್ 30ರ ವರೆಗೆ ಟೆಲಿಗ್ರಾಂನಲ್ಲಿ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲಾಗಿದೆ. ವಾಟ್ಸ್ ಆ್ಯಪ್‌ನಂತಹ ಮೆಸೇಜಿಂಗ್ ಆ್ಯಪ್ಗಳಿಗೆ ಹೋಲಿಸಿದರೆ ಟೆಲಿಗ್ರಾಂ ವಂಚಕರಿಗೆ ಹೆಚ್ಚು ಸಹಕಾರಿಯಾಗಿದೆ. ಟೆಲಿಗ್ರಾಂನಲ್ಲಿ ಬಳಕೆದಾರರು ತಮ್ಮ ಫೋನ್ ನಂಬರ್‌ಮರೆಮಾಚಿ ಅದನ್ನು ಬಳಸಬಹುದು. ಕೇವಲ ಯೂಸರ್‌ನೇಮ್ ಮೂಲಕ ಅಲ್ಲದೆ, ಇದರ ಪಬ್ಲಿಕ್ ಚಾನೆಲ್ಗಳು ಮತ್ತು ಬಾಟ್‌ಗಳ ಮೂಲಕ ಲಕ್ಷಾಂತರ ಜನರಿಗೆ ಒಂದೇ ಬಾರಿಗೆ ಮೆಸೇಜ್ ಮಾಡಬಹುದಾಗಿದೆ. ಆದರೆ, ವಾಟ್ಸ್ಆ್ಯಪ್‌ನಲ್ಲಿ ಹೀಗಿಲ್ಲ. ಪ್ರತಿಯೊಂದು ಮೆಸೇಜ್ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಎಲ್ಲದಕ್ಕೂ ಎಂಡ್-ಟು-ಎಂಡ್ ಎನ್‌ಕ್ರಿಷ್ಣನ್ ಆಯ್ಕೆಯಿದೆ. ಆದರೆ, ಟೆಲಿಗ್ರಾಮ್‌ನ (Telegram ban)ಸಾಮಾನ್ಯ ಚಾನೆಲ್ ಮತ್ತು ಗ್ರೂಪ್‌ಗಳಲ್ಲಿ ಈ ಆಯ್ಕೆಯಿಲ್ಲ, ಹಾಗಾಗಿ ಇದು ವಂಚನೆಗೆ ದಾರಿಮಾಡಿಕೊಡಲಿದೆ ಎಂಬ ಕಾರಣಕ್ಕೆ ಸರ್ಕಾರ ಬ್ಯಾನ್ ಮಾಡಿದೆ.

Whatsapp / https://chat.whatsapp.com/JrsZ8He4nN600n0r3tJItz