ಮೇ 20ರಂದು ಶಿವಮೊಗ್ಗದ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

This Article Written by / ajjimane ganesh / ಮೇ 18, 2026

ವಿದ್ಯುತ್ ವ್ಯತ್ಯಯ

ಶಿವಮೊಗ್ಗ : ಎಂ.ಆರ್.ಎಸ್ 220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66 ಕೆವಿ ಡಿವಿಜಿ-1 ಬೇ ಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿದ್ದು ಮೇ 20 ರಂದು ಕರೆಂಟ್ ಇರಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಳೆಹೊನ್ನೂರು ವಿ ವಿ ಕೇಂದ್ರ, ಹೊಳಲೂರು ವಿ ವಿ ಕೇಂದ್ರ ಮತ್ತು ತಾವರೆಚಟ್ನಹಳ್ಳಿ ವಿ ವಿ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಗಿನ ಗ್ರಾಮಗಳ ಮೇ 20 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ ಕೆಳಕಂಡ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ

ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ಕರೆಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೇಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್,

ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು ಮತ್ತು ಕೃಷಿ ಕಾಲೇಜು ಆವರಣ,

ಗೋಂದಿಚಟ್ನಹಳ್ಳಿ, ಹೊಳೇಹನಸವಾಡಿ, ಕುಂಚೇನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ವಿದ್ಯುತ್ ವ್ಯತ್ಯಯ

ಮುಂದಿನ ಸುದ್ದಿ ಒದಿ