ಶಿವಮೊಗ್ಗ / ಶಿವಮೊಗ್ಗದಲ್ಲಿ ನಿನ್ನೆ ಸಂಜೆ ಕೆಲವು ಗಂಟೆಗಳ ಕಾಲ ಸುರಿದ ಮಳೆ ಸಾಕಷ್ಟು ಸಮಸ್ಯೆಯನ್ನ ತಂದಿಟ್ಟಿತ್ತು. ಅದರಲ್ಲಿಯು ಮಳೆಯಿಂದಾಗಿ ಮರಗಳು ಬಿದ್ದ ಕಾರಣಕ್ಕೆ ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವಿಶೇಷವಾಗಿ ಶಿವಮೊಗ್ಗ ಮತ್ತು ಭದ್ರಾವತಿ ನಡುವಿನ ರೈಲ್ವೆ ಮಾರ್ಗದಲ್ಲಿ ಮರ ಉರುಳಿ ಹಲವು ರೈಲುಗಳು ಅಲ್ಲಲ್ಲೆ ಗಂಟೆಗಟ್ಟಲೇ ನಿಂತಿದ್ದವು. ಜನಶತಾಬ್ದಿ ಎಕ್ಸ್‌ಪ್ರೆಸ್ ತರಿಕೆರೆಯಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ನಿಂತಿದ್ದರಿಂದ ಶಿವಮೊಗ್ಗಕ್ಕೆ ಬರಬೇಕಿದ್ದ ಪ್ರಯಾಣಿಕರು ತರಿಕೆರೆಯಲ್ಲಿ ಕಾಯುವಂತಾಗಿತ್ತು. ಇದಷ್ಟೆ ಅಲ್ಲದೆ ಶಿವಮೊಗ್ಗ ಚಿಕ್ಕಮಗಳೂರು ಪ್ಯಾಸೆಂಜರ್ ರೈಲು, ಕುವೆಂಪು ಎಕ್ಸ್‌ಪ್ರೆಸ್ ಟ್ರೈನ್ಗಳು ಕೂಡ ಸಮಸ್ಯೆ ಎದುರಿಸಿದೆ.
ನಿನ್ನೆ ಮಳೆ ಗಾಳಿಗೆ ಶಿವಮೊಗ್ಗ ಹಾಗೂ ಭದ್ರಾವತಿ ನಡುವೆ ಮರ ಬಿದ್ದ ರಭಸಕ್ಕೆ ರೈಲ್ವೆ ವಿದ್ಯುತ್ ಲೈನ್ ತುಂಡಾಗಿತ್ತು. ಹೀಗಾಗಿ ರೈಲುಗಳ ಓಡಾಟಕ್ಕೆ ಅಡಚಣೆ ಎದುರಾಯಿತು ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಮುಂದಕ್ಕೆ ಹೋಗಲಾಗದೆ ಶಿವಮೊಗ್ಗ ವಾಪಸ್ ತರಲಾಯ್ತು. ಸಂಜೆ 6:35ಕ್ಕೆ ಶಿವಮೊಗ್ಗದಿಂದ ಪ್ರಯಾಣ ಬೆಳೆಸಿದ್ದ ಶಿವಮೊಗ್ಗ-ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಮರ ಬಿದ್ದ ಕಾರಣ ಮಾರ್ಗಮಧ್ಯದಿಂದಲೇ ಹಿಂದಕ್ಕೆ ಮರಳಿತು. ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್‌ಸಿಟಿ ರೈಲು ರಾತ್ರಿ ಹತ್ತು ಗಂಟೆಯವರೆಗೂ ಮಧ್ಯದಲ್ಲಿಯೇ ನಿಂತಿತ್ತು ಜನಶತಾಬ್ದಿ ರೈಲು ತರೀಕೆರೆಯಲ್ಲಿಯೇ ಒಂದು ಗಂಟೆಗೂ ಹೆಚ್ಚು ಕಾಲ ನಿಲ್ಲಿಸಲಾಗಿತ್ತು. ಬಳಿಕ 10 ಗಂಟೆಯ ನಂತರ ಶಿವಮೊಗ್ಗಕ್ಕೆ ಪ್ರಯಾಣಿಸಿದೆ. ಮೈಸೂರು-ಶಿವಮೊಗ್ಗ ಕುವೆಂಪು ಎಕ್ಸ್‌ಪ್ರೆಸ್ ರೈಲನ್ನು ಸಹ ತರೀಕೆರೆಯಲ್ಲಿ ಸ್ಟಾಪ್ ಮಾಡಲಾಗಿತ್ತು. ಈ ರೈಲು ಸಹ 10 ಗಂಟೆಯ ನಂತರ ಪ್ರಯಾಣ ಆರಂಭಿಸಿತು.
ಒಟ್ಟಾರೆ, ವಿದ್ಯುತ್ ಲೈನ್ಗೆ ಸಮಸ್ಯೆಯಾದ್ದರಿಂದ ರೈಲು ಸಂಚಾರದಲ್ಲಿ ಏರುಪೇರಾಗಿತ್ತು. ಅಂತಿಮವಾಗಿ ರೈಲ್ವೆ ಸಿಬ್ಬಂದಿಯ ಮಳೆಯ ನಡುವೆಯು ಲೈನ್ ಕ್ಲೀಯರ್ ಮಾಡಿ, ರೈಲುಗಳ ಸಂಚಾರಕ್ಕೆ ಅನುವುಮಾಡಿಕೊಟ್ಟರು. ಆದಾಗ್ಯು ಈ ಸಮಸ್ಯೆಯಿಂದಾಗಿ ಪ್ರಯಾಣಿಕರು ನಡುದಾರಿಯಲ್ಲಿ ತೊಂದರೆ ಎದುರಿಸಿದರು.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.
