ಅನೈತಿಕ ಸಂಬಂಧ: ಗಂಡನ ಕೊಂದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ – ಭದ್ರಾವತಿ ಕೋರ್ಟ್ ತೀರ್ಪು

ಹಂಚಿಕೊಳ್ಳಿ
WhatsApp Facebook X Telegram
ಅನೈತಿಕ ಸಂಬಂಧ: ಗಂಡನ ಕೊಂದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ - ಭದ್ರಾವತಿ ಕೋರ್ಟ್ ತೀರ್ಪು, Bhadravathi Murder Case: Wife and Paramour Get Death Penalty for Killing Husband
ಅನೈತಿಕ ಸಂಬಂಧ: ಗಂಡನ ಕೊಂದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ - ಭದ್ರಾವತಿ ಕೋರ್ಟ್ ತೀರ್ಪು, Bhadravathi Murder Case: Wife and Paramour Get Death Penalty for Killing Husband

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ 14,00,000 ರೂಪಾಯಿಗಳ ದಂಡವನ್ನು ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.

ಭದ್ರಾವತಿಯಲ್ಲಿ 2020 ರಲ್ಲಿ ನಡೆದ ಘಟನೆ

ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುರಗಿತೋಪಿನ ನಿವಾಸಿ ಫ್ಲೋರಾ ನ್ಯಾನ್ಸಿ ಹಾಗೂ ರಾಜಶೇಖರಯ್ಯ ಎಂಬುವವರೇ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು.

2020ರ ಜನವರಿ 15ರಂದು ಈ ಘಟನೆ ನಡೆದಿತ್ತು. ಫ್ಲೋರಾ ನ್ಯಾನ್ಸಿ ಎಂಬಾಕೆ ರಾಜಶೇಖರಯ್ಯ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಚಾರದಲ್ಲಿ ಪತಿ ಪ್ರಕಾಶ್ ಬಾಬು ಅವರು ವಿರೋಧ ವ್ಯಕ್ತಪಡಿಸಿದ್ದ.

ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿದ್ದರು ಎಂಬ ಕಾರಣಕ್ಕೆ ಫ್ಲೋರಾ ನ್ಯಾನ್ಸಿ ಹಾಗೂ ರಾಜಶೇಖರಯ್ಯ ಇಬ್ಬರೂ ಸೇರಿ ಸಂಚು ರೂಪಿಸಿ, ಪ್ರಕಾಶ್ ಬಾಬು ಅವರಿಗೆ ನಿದ್ದೆ ಬರುವ ಔಷಧಿಯನ್ನು ನೀಡಿ, ತದನಂತರ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302 ಹಾಗೂ 201ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕರು ಹಾಗೂ ತನಿಖಾಧಿಕಾರಿಯಾಗಿದ್ದ ಮಂಜುನಾಥ್ ಈ. ಓ. ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು.

ಭದ್ರಾವತಿ ಕೋರ್ಟ್ ತೀರ್ಪು

ಪ್ರಕರಣದ ವಿಚಾರಣೆ ನಡೆಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ , ಲಭ್ಯವಿರುವ ಸಾಕ್ಷ್ಯಾಧಾರಗಳು ಹಾಗೂ ವಾದ ವಿವಾದಗಳನ್ನು ಆಲಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ತಿ ರತ್ನಮ್ಮ ಪಿ. ಅವರು ವಾದ ಮಂಡಿಸಿದ್ದರು.

ಅಂತಿಮವಾಗಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರೂ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ 14,00,000 ರೂಪಾಯಿಗಳ ದಂಡವನ್ನು ವಿಧಿಸಲಾಗಿದ್ದು, ಈ ಪೈಕಿ 5,00,000 ರೂಪಾಯಿಗಳನ್ನು ದೂರುದಾರರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಅನೈತಿಕ ಸಂಬಂಧ: ಗಂಡನ ಕೊಂದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ - ಭದ್ರಾವತಿ ಕೋರ್ಟ್ ತೀರ್ಪು,  Bhadravathi Murder Case: Wife and Paramour Get Death Penalty for Killing Husband
ಅನೈತಿಕ ಸಂಬಂಧ: ಗಂಡನ ಕೊಂದ ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ – ಭದ್ರಾವತಿ ಕೋರ್ಟ್ ತೀರ್ಪು, Bhadravathi Murder Case: Wife and Paramour Get Death Penalty for Killing Husband

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor