POLITICS

ಚಿತ್ರದುರ್ಗ ಬಿ.ಎಸ್.ವೈ ಅಭಿಮಾನೋತ್ಸವ: ಕೆ.ಎಸ್. ಈಶ್ವರಪ್ಪರನ್ನ ಭೇಟಿಯಾದ ಬಿ.ವೈ. ರಾಘವೇಂದ್ರ! ಏನೇಲ್ಲಾ ನಡೆಯಿತು!

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ಸುದೀರ್ಘ ರಾಜಕೀಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಚಿತ್ರದುರ್ಗದಲ್ಲಿ ‘ಬಿಎಸ್ವೈ-50 ಅಭಿಮಾನೋತ್ಸವ’ ಹೆಸರಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಶೇಷ ಅಂದರೆ ಈ ಕಾರ್ಯಕ್ರಮಕ್ಕೆ ಬಿಎಸ್​ವೈ ರವರ ಆಪ್ತ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪನವರನ್ನ ಆಹ್ವಾನಿಸ್ತಾರಾ ಎಂಬ ಕುತೂಹಲ ಮೂಡಿತ್ತು. ಇದೀಗ ನಿರೀಕ್ಷೆಯಂತೆಯೇ ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ. 

ಬಿ.ಎಸ್.ವೈ ಅಭಿಮಾನೋತ್ಸವ ಕ್ಕೆ ಬರುವಂತೆ ಕರೆಯೋಲೆ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ಖುದ್ದಾಗಿ ಈಶ್ವರಪ್ಪ ಅವರ ಮನೆಗೆ ಭೇಟಿ ನೀಡಿ ಆಮಂತ್ರಣ ಪತ್ರಿಕೆಯನ್ನು ಹಸ್ತಾಂತರಿಸಿದರು. ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ಬಡಾವಣೆಯಲ್ಲಿರುವ ಕೆ.ಎಸ್. ಈಶ್ವರಪ್ಪ ಅವರ ನಿವಾಸಕ್ಕೆ ತೆರಳಿದ ಸಂಸದ ರಾಘವೇಂದ್ರ ಅವರು, ಚಿತ್ರದುರ್ಗದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರಿದರು. 

ಭಾರತೀಯ ಜನತಾ ಪಾರ್ಟಿಯಿಂದ (ಬಿಜೆಪಿ) ದೂರವಿರುವ ಕೆ.ಎಸ್. ಈಶ್ವರಪ್ಪ, ‘ರಾಷ್ಟ್ರಭಕ್ತರ ಬಳಗ’ ಎಂಬ ಹೊಸ ಸಂಘಟನೆಯನ್ನು ಕಟ್ಟಿಕೊಂಡು ಸಕ್ರಿಯರಾಗಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರ್ಯವೈಖರಿಯ ವಿರುದ್ಧ ಕೆ.ಎಸ್. ಈಶ್ವರಪ್ಪ ಈ ಹಿಂದೆ ಅಸಮಾಧಾನ ಹೊರಹಾಕಿದ್ದರು. ಆನಂತರ ನಡೆದ ಚುನಾವಣೆಯಲ್ಲಿಯು ಬಂಡಾಯವಾಗಿ ಸ್ಪರ್ಧೆ ಮಾಡಿದ್ದರು. 

ತದನಂತರ ಬಿಎಸ್​ವೈ ಕುಟುಂಬದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ತಮ್ಮ ಪುತ್ರನೊಂದಿಗೆ ಪಾಲ್ಗೊಂಡು ಕೆಎಸ್​ ಈಶ್ವರಪ್ಪ ಅಚ್ಚರಿ ಮೂಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಂತರ ಇದೀಗ ನಾಳಿನ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಕೆಎಸ್​ ಈಶ್ವರಪ್ಪ ಪಾಲ್ಗೊಳ್ಳುತ್ತಾರೆಯೇ ಎಂಬ ಕುತೂಹಲ ಮೂಡಿದೆ. 

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Chitradurga BSY Abhimanotsava MP BY Raghavendra Invites KS Eshwarappa ಚಿತ್ರದುರ್ಗ ಬಿ.ಎಸ್.ವೈ ಅಭಿಮಾನೋತ್ಸವ ಕೆ.ಎಸ್. ಈಶ್ವರಪ್ಪರನ್ನ ಭೇಟಿಯಾದ ಬಿ.ವೈ. ರಾಘವೇಂದ್ರ! ಏನೇಲ್ಲಾ ನಡೆಯಿತು!
Chitradurga BSY Abhimanotsava MP BY Raghavendra Invites KS Eshwarappa ಚಿತ್ರದುರ್ಗ ಬಿ.ಎಸ್.ವೈ ಅಭಿಮಾನೋತ್ಸವ ಕೆ.ಎಸ್. ಈಶ್ವರಪ್ಪರನ್ನ ಭೇಟಿಯಾದ ಬಿ.ವೈ. ರಾಘವೇಂದ್ರ! ಏನೇಲ್ಲಾ ನಡೆಯಿತು!

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ