ಸಾಗರ: ಕ್ರೇನ್ ಡಿಕ್ಕಿಯಾಗಿ ವ್ಯಕ್ತಿ ದುರ್ಮರಣ, ಪೊಲೀಸ್ ಠಾಣೆ ಎದುರು ಪ್ರತಿಭಟನೆ

Published: 17 ಏಪ್ರಿಲ್ 2026, 2:20 ಅಪರಾಹ್ನ IST • 1 min read

Sagara Road Accident ಸಾಗರ: ನಗರದ ಸಿಗಂದೂರು ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಸಾಗರ ಟೌನ್ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ: ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರದಾನ 

ಸಾಗರ ತಾಲೂಕಿನ ಹುಲಿಮನೆ ಗ್ರಾಮದ ಲಕ್ಷ್ಮಣ (65) ಮೃತಪಟ್ಟ ದುರ್ದೈವಿ. ಇವರು ಕೆಲಸದ ನಿಮಿತ್ತ ಗ್ರಾಮದಿಂದ ಸಾಗರಕ್ಕೆ ಬಂದಿದ್ದಾಗ ವೇಗವಾಗಿ ಬಂದ ಕ್ರೇನ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ. 

ಘಟನೆ ನಡೆದ ಬಳಿಕ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ತಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮೃತರ ಸಂಬಂಧಿಕರು, ಇನ್ಸ್ಪೆಕ್ಟರ್ ಅವರು ದೂರುದಾರರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. 

ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಾಗರ ಎಎಸ್ಪಿ ಅವರು ಪ್ರತಿಭಟನಾಕಾರರ ಬಳಿ ಬಂದು ಮಾತುಕತೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಮತ್ತು ಕರ್ತವ್ಯ ಲೋಪದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

Sagara Road Accident Man Killed After Crane Hits

Sagara Road Accident Ghat Reopens Akka Pade Vehicle Rally Jio Tower Scam Shivamogga KFD Alert Collapse Canara Bank ತೀರ್ಥಹಳ್ಳಿ : ಬೈಕ್​ ತಗೊಂಡೋರು, ಕ್ಲಿಯರೆನ್ಸ್ ಲೆಟರ್​ ಕೇಳಿದ್ದಕ್ಕೆ ಏನೆಲ್ಲಾ ಆಯ್ತು ಓದಿ
Sagara Road Accident
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Ganesh Ajjimane

Senior Journalist | Malenadu Today
✓ Verified Journalist

Authority

Published by: Malenadu Today Editorial Desk
✓ Fact Checked   ✓ Updated   Editorial Policy