MP Raghavendra’s ಹೊಸನಗರ/ದೆಹಲಿ: ಹೊಸನಗರ ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮರುಸ್ಥಾಪಿಸಬೇಕೆಂಬ ದಶಕಗಳ ಕಾಲದ ಹೋರಾಟಕ್ಕೆ ಈಗ ರಾಷ್ಟ್ರಮಟ್ಟದ ವೇದಿಕೆ ಸಿಕ್ಕಿದೆ. ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರು ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ, ಮಲೆನಾಡಿನ ಜನರ ದಶಕಗಳ ಬೇಡಿಕೆಯನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಶಿವಮೊಗ್ಗ ಗ್ರಾಮಾಂತರ : ರಾಗಿ ಗುಡ್ಡದ ವೈನ್ಶಾಪ್ನಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ
1972 ರಿಂದ 2004 ರವರೆಗೆ ಸ್ವತಂತ್ರ ಅಸ್ತಿತ್ವ ಹೊಂದಿದ್ದ ಹೊಸನಗರ ಕ್ಷೇತ್ರವನ್ನು 2008 ರ ಮರುವಿಂಗಡಣೆಯ ಸಮಯದಲ್ಲಿ ಅಕ್ಕಪಕ್ಕದ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ನಿರ್ಧಾರದಿಂದಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಸಂಸದರು ಸದನಕ್ಕೆ ವಿವರಿಸಿದರು. ಶರಾವತಿ ಮತ್ತು ವಾರಾಹಿ ನದಿಗಳ ಉಗಮ ಸ್ಥಾನವಾಗಿರುವ ಇಲ್ಲಿನ ಭೌಗೋಳಿಕ ಮತ್ತು ಆರ್ಥಿಕ ಸವಾಲುಗಳು ವಿಭಿನ್ನವಾಗಿದ್ದು, ಜನಸಂಖ್ಯೆಗಿಂತ ಹೆಚ್ಚಾಗಿ ಪ್ರದೇಶದ ವಿಸ್ತೀರ್ಣವನ್ನು ಪರಿಗಣಿಸುವುದು ಅವಶ್ಯಕ ಎಂದರು.
ಪಶ್ಚಿಮ ಘಟ್ಟದ ಕಠಿಣ ಭೂಪ್ರದೇಶಗಳನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಗರ ಪ್ರದೇಶಗಳೊಂದಿಗೆ ಹೋಲಿಸುವುದು ಅವೈಜ್ಞಾನಿಕ ಎಂದು ರಾಘವೇಂದ್ರ ಪ್ರತಿಪಾದಿಸಿದರು. ಏಪ್ರಿಲ್ ಮೊದಲ ವಾರದಲ್ಲಿ ಹೊಸನಗರದಲ್ಲಿ ನಡೆದ ಪಾದಯಾತ್ರೆಯನ್ನು ಉಲ್ಲೇಖಿಸಿದ ಅವರು, ಪಕ್ಷಾತೀತವಾಗಿ ಮಠಾಧೀಶರು ಮತ್ತು ಸಾವಿರಾರು ನಾಗರಿಕರು ಈ ಬೇಡಿಕೆಗಾಗಿ ಬೀದಿಗಿಳಿದಿದ್ದಾರೆ. ಇದು ಕೇವಲ ರಾಜಕೀಯ ಬೇಡಿಕೆಯಲ್ಲ, ಮಲೆನಾಡಿನ ಜನರ ಘನತೆಯ ಪ್ರಶ್ನೆಯಾಗಿದೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟರು.
ಮುಂದಿನ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ಹೊಸನಗರಕ್ಕೆ ಪ್ರತ್ಯೇಕ ಅಸ್ತಿತ್ವ ನೀಡುವುದು ಆಡಳಿತಾತ್ಮಕವಾಗಿ ಅನಿವಾರ್ಯವಾಗಿದೆ. ಈ ಮೂಲಕ ಮಲೆನಾಡಿನ ಜನರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕೆಂದು ಅವರು ಒತ್ತಾಯಿಸಿದರು.
MP Raghavendra’s Fights for Hosanagara Political Identity


