ಹೊಸನಗರ ತಾಲೂಕಿನ ಯಡೂರು ಗ್ರಾಮದ ವಿದ್ಯಾರ್ಥಿ ನಿಹಾಲ್ ಎಸ್ಎಸ್ಎಲ್ಸಿ ಮಾದರಿಯಲ್ಲಿಯೇ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿರುವ ಪ್ರದೇಶದಿಂದ ಬಂದ ಇವರು, ತಮ್ಮ ವಿದ್ಯಾಭ್ಯಾಸದಲ್ಲಿ ಗಮನಾರ್ಹ ಫಲಿತಾಂಶ ದಾಖಲಿಸಿದ್ದಾರೆ.
ಯಡೂರು ಗ್ರಾಮವು ಮಾನಿ ಆಣೆಕಟ್ಟಿನ ಬಲದಂಡೆಯ ಕೆಳಭಾಗದಲ್ಲಿರುವ ಪ್ರದೇಶ. ನೆಟ್ವರ್ಕ್ನಿಂದ ಹಿಡಿದು ಹಲವು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ನಡುವೆ ಯಡೂರಿನ ನಿಹಾಲ್ ಸೆಕೆಂಡ್ ಪಿಯುಸಿಯಲ್ಲಿ ಅದ್ಭುತ ರಿಸಲ್ಟ್ ತೆಗೆದಿದ್ದಾರೆ ಆರನೂರಕ್ಕೆ ಬರೋಬ್ಬರಿ 596 ಮಾರ್ಕ್ ಗಳಿಸಿದ್ದಾನೆ.
ಹೊಸನಗರ ತಾಲೂಕಿನ ಯಡೂರು ವಿದ್ಯಾರ್ಥಿ ನಿಹಾಲ್ ಸಾಧನೆಯ ವಿವರ
ನಿಹಾಲ್ ಹೆಚ್.ಜಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ ಹಾಗೂ ಗಣಕ ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿದ್ದಾರೆ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 99 ಹಾಗೂ ರಸಾಯನಶಾಸ್ತ್ರದಲ್ಲಿ 98 ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ (Distinction) ಉತ್ತೀರ್ಣರಾಗಿದ್ದಾರೆ.
ನಿಹಾಲ್ ಅವರ ಈ ಶೈಕ್ಷಣಿಕ ಸಾಧನೆಗೆ ಅವರ ಪೋಷಕರಾದ ಗಣೇಶ್ ಹಾಗೂ ಸಹನಾ ಅವರ ನಿರಂತರ ಬೆಂಬಲ ಕಾರಣವಾಗಿದೆ. ಮಗನ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಟ್ಟ ಪೋಷಕರ ಪಾತ್ರ ಪ್ರಶಂಸನೀಯ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
