ವಿನೋಬನಗರ ಪೊಲೀಸ್ ಸ್ಟೇಷನ್ ಎಸ್​ಐ ಮಂಜುನಾಥ್​ಗೆ ಹೃದಯಾಘಾತ! ಸಾವು!

ಹಂಚಿಕೊಳ್ಳಿ
WhatsApp Facebook X Telegram
Shivamogga Vinobanagar Police Station SI Manjunath Passes Away Due to Heart Attack
Shivamogga Vinobanagar Police Station SI Manjunath Passes Away Due to Heart Attack

Shivamogga Vinobanagar Police Station / ಮಲೆನಾಡು ಟುಡೆ / ಶಿವಮೊಗ್ಗ / ಶಿವಮೊಗ್ಗ ಪೊಲೀಸ್ ಇಲಾಖೆಗೆ ಇವತ್ತು ದುಃಖದ ದಿನ, ಬಿಡುವಿಲ್ಲದ ಡ್ಯೂಟಿಗಳ ನಡುವೆ ಸ್ಟ್ರೇಸ್​ ಆಗುತ್ತಿರುವ ಪೊಲೀಸ್ ಸಿಬ್ಬಂದಿಯಲ್ಲಿ ಅವರ ಸಹೋದ್ಯೋಗಿ ಒಬ್ಬರ ಸಾವು ಇವತ್ತು ದುಃಖವನ್ನು ಮೂಡಿಸಿದೆ. ಹೌದು ,ವಿನೋಬನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾರ್ಟ್​ ಅಟ್ಯಾಕ್​ನಿಂದ ಸಾವನ್ನಪ್ಪಿದ್ದಾರೆ.

ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ದ ಪೊಲೀಸ್ ಅಧಿಕಾರಿ, ಜನಸ್ನೇಹಿ ಅಧಿಕಾರಿಯಾಗಿದ್ದರು. ಅವರ ಅಗಲಿಕೆಯು ಆಘಾತ ಮೂಡಿಸಿದೆ ಅಂತಾ ಪೊಲೀಸ್ ಇಲಾಖೆ ಹೇಳಿಕೊಂಡಿದೆ. ಈ ಬಗ್ಗೆ ಎಸ್​ಪಿ ಕಚೇರಿಯಿಂದ ಶ್ರದ್ಧಾಂಜಲಿಯ ಸಂದೇಶ ಹೊರಬಿದ್ದಿದ್ದು , ಸಂದೇಶದಲ್ಲಿ ಇಲಾಖೆಯ ವತಿಯಿಂದ ಸಂತಾಪವನ್ನು ವ್ಯಕ್ತಪಡಿಸಲಾಗಿದೆ.

ಇನ್ನೂ ವಿನೋಬನಗರ ಪೊಲೀಸ್ ಠಾಣೆಯ ಎಲ್ಲಾ ಹಿರಿಯ ಅಧಿಕಾರಿಗಳು, ಸಹೋದ್ಯೋಗಿ ಸಿಬ್ಬಂದಿ ಹಾಗೂ ಇಲಾಖೆಯ ಉದ್ಯೋಗಿಗಳು ಮೃತರಿಗೆ ಸಂತಾಪ ಸೂಚಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor