ಶಿವಮೊಗ್ಗ ಸೆಂಟ್ರಲ್​ ಜೈಲ್​ಗೆ ಎಸ್​ಪಿ ನಿಖಿಲ್ ಬಿ ಮೊದಲ ವಿಸಿಟ್! ಕೇಳಿತು ‘RISE & BEDA BRO’ ಸ್ಲೋಗನ್!

ಹಂಚಿಕೊಳ್ಳಿ
WhatsApp Facebook X Telegram
Shivamogga Central Prison
Shivamogga Central Prison

Shivamogga Central Prison / ಮಲೆನಾಡು ಟುಡೆ / ಶಿವಮೊಗ್ಗ / ಶಿವಮೊಗ್ಗ ಕೇಂದ್ರ ಕಾರಾಗೃಹ ನಿನ್ನೆಯಷ್ಟೆ ರಕ್ತದಾನ ಶಿಬಿರದ ಮೂಲಕ ಸುಧಾರಣಾ ಇಲಾಖೆಯ ಇತಿಹಾಸದಲ್ಲೆ ಹೊಸದೊಂದು ಪ್ರಯತ್ನದಲ್ಲಿ ಯಶಸ್ವಿಯಾಗಿತ್ತು. ಇದೀಗ ಇವತ್ತು ಮತ್ತೊಂದು ಅಭಿಯಾನ ಕೈಗೊಳ್ಳುವ ಮೂಲಕ ಮತ್ತೆ ಮಾದರಿಯಾಗಿದೆ. ಇಂದು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ‘RISE & BEDA BRO’ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸ್ವತಃ ಶಿವಮೊಗ್ಗ ಎಸ್​ಪಿ ನಿಖಿಲ್​ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗಾಗಲೇ ಬೇಡ ಬ್ರೋ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಎಸ್​ಪಿ ನಿಖಿಲ್ ಜೈಲಿನಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಂಡು ಖುಷಿಪಟ್ಟರು. ಅಂದಹಾಗೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಕೇಂದ್ರ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಅವರು , ಯಾರು ಮಾದಕ ವ್ಯಸನಕ್ಕೆ ಸಂಪೂರ್ಣವಾಗಿ ಒಳಗಾಗಿದ್ದಾರೋ ಅಂತಹವರು ತಕ್ಷಣವೇ ಆ ದುಶ್ಚಟದಿಂದ ಮುಕ್ತರಾಗಬೇಕು. ತಮ್ಮ ಹೆತ್ತ ತಂದೆ-ತಾಯಿ, ಹೆಂಡತಿ-ಮ ಮಕ್ಕಳು ಹಾಗೂ ಇಡೀ ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಮಾದಕ ವ್ಯಸನವನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ತ್ಯಜಿಸಬೇಕು. ಮಾದಕ ವ್ಯಸನಗಳಿಂದ ದೂರವಿದ್ದರೆ ಅದು ನಮ್ಮ ಜೀವನದ ಅರ್ಧ ಭಾಗವನ್ನು ಗೆದ್ದಂತೆ ಎಂದು ಅಭಿಪ್ರಾಯ ಪಟ್ಟರು.

ಮುಂದುವರೆದು ಮಾದಕ ವ್ಯಸನದ ದಾಸರಾದವರು ಅದರಿಂದ ಸಂಪೂರ್ಣ ಮುಕ್ತಿ ಪಡೆದು ಅಪರಾಧಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವ ಮೂಲಕ ಆದರ್ಶಪ್ರಾಯ ನಾಗೃಕರಾಗಿ ಬಾಳುವಂತಾಗಲು ಜಿಲ್ಲಾ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಹಾಗೂ ಬಂದಿಗಳಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ ಅಂತಾ ಎಸ್​ಪಿ ನಿಖಿಲ್ ಬಿ ತಿಳಿಸಿದರು.

ಇನ್ನೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಪಿ. ರಂಗನಾಥ್​ , ಹೊಸದಾಗಿ ಜೈಲ್​ಗೆ ಇನ್​ ಆಗುವ ಕೈದಿಗಳ ಅನುಕೂಲಕ್ಕಾಗಿಯೇ ವಿಶೇಷ ಆಪ್ತ ಸಮಾಲೋಚನೆ ಮತ್ತು ವ್ಯಸನ ಮುಕ್ತಿ ಕೇಂದ್ರ ತೆರೆಯಲಾಗಿದೆ. ಇದರ ಮೂಲಕ ಬಂದಿಗಳ ಮನಪರಿವರ್ತನೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ದುಶ್ಚಟಗಳಿಂದ ದೂರವಿರುವುದು ಬಂದಿಯ ಸನ್ನಡತೆಗೆ ಪ್ರಮುಖ ಮಾನದಂಡ ಎಂದರು.

ಇದೇ ವೇಳೆ ಕಾರಾಗೃಹದ ಬಂದಿಗಳಿಂದ ಪ್ರದರ್ಶಿಸಲ್ಪಟ್ಟ “ದಯಾಮರಣ” ಎಂಬ ವಿಶೇಷ ನಾಟಕ ಪ್ರದರ್ಶನ ಮಾಡಲಾಯ್ತು. ಉತ್ತರ ಪ್ರದೇಶದ 32 ರ ಹರೆಯದ ವಿದ್ಯಾರ್ಥಿ ಹರೀಶ್ ರಾಣಾ ಪ್ರಕರಣ ಕುರಿತು ಭಾರತ ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಆಧರಿಸಿದ ಈ ಕಿರುನಾಟಕವನ್ನು ಬಂದಿಗಳೇ ಅಭಿನಯಿಸಿ ತೋರಿಸಿದ್ದು ವಿಶೇಷವಾಗಿತ್ತು. ದಯಾಮರಣ ಎಂದರೇನು, ಅದು ಯಾರಿಗೂ ಸಿಗುತ್ತದೆ ಮತ್ತು ಹೇಗೆ ಸಿಗುತ್ತದೆ ಎಂಬ ಕುತೂಹಲಕಾರಿ ಅಂಶಗಳ ಸುತ್ತ ಈ ನಾಟಕ ಹೆಣೆಯಲಾಗಿದೆ.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರಿಯಪ್ಪ, ಕೈಗಾರಿಕಾ ಭದ್ರತಾ ಪಡೆಯ ಶಶಿಕುಮಾರ್, ಇನ್‌ಸ್ಪೆಕ್ಟರ್ ಜಗದೀಶ್, ದಾವಣಗೆರೆ ಜಿಲ್ಲೆಯ ಎಎಸ್‌ಆರ್‌ ಡಿವೈಎಸ್‌ಪಿ ನಾಗರಾಜ್, ಇನ್‌ಸ್ಪೆಕ್ಟರ್ ಗಜೇಂದ್ರಪ್ಪ, ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಅಶೋಕ್ ಭಜಂತ್ರಿ, ಸುನಿಲ್ ಡಿ. ಗಲ್ಲೆ, ಸಂಸ್ಥೆಯ ಶಿಕ್ಷಕರಾದ ಗೋಪಾಲಕೃಷ್ಣ ಹಾಗೂ ಲೀಲಾ ಎಸ್. ಎನ್. ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor