shivamogga malenadu today epaper / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ರಾಜಕೀಯ, ಶೈಕ್ಷಣಿಕ, ಕೃಷಿ ಹಾಗೂ ಅಪರಾಧ ಸುದ್ದಿಗಳ ಪ್ರಮುಖ ಹಾಗೂ ವಿಶೇಷ ವರದಿಗಳನ್ನು ನೀಡುವ ನಿಮ್ಮ ಮಲೆನಾಡು ಟುಡೆಯ ಇವತ್ತಿನ ಇ ಪತ್ರಿಕೆಯ ವಿವರ ಹೀಗಿದೆ. ತಪ್ಪದೆ ‘ಮಲೆನಾಡು ಟುಡೆ’ ಇ-ಪೇಪರ್ ಓದಿ.
ಇವತ್ತಿನ ಪ್ರಮುಖ ಸುದ್ದಿಗಳ 10 ಬ್ರೇಕಿಂಗ್ ಪಾಯಿಂಟ್ಸ್
ಏತ ನೀರಾವರಿಗೆ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಪ್ರತಿಭಟನೆ: ಉಡುಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಗಳ ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಪೂರೈಸದ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿಯಿಂದ ಶಿಕಾರಿಪುರದಲ್ಲಿ ಧರಣಿ ಸತ್ಯಾಗ್ರಹ
ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ: ಸ್ನಾತಕೋತ್ತರ ಪ್ರವೇಶ ಮರುಆರಂಭಿಸುವುದು ಹಾಗೂ ಡಿಜಿಟಲ್ ಮೌಲ್ಯಮಾಪನ ದೋಷ ಸರಿಪಡಿಸುವಂತೆ ಆಗ್ರಹಿಸಿ ಎಬಿವಿಪಿ ವತಿಯಿಂದ ಕುವೆಂಪು ವಿವಿ ಕುಲಪತಿಗೆ ಮನವಿ
ಅಂಜನಾಪುರ ಮತ್ತು ಅಂಬ್ಲಿಗೋಳ ಜಲಾಶಯದ ರೈತರಿಗೆ ಎಚ್ಚರಿಕೆ: ಮಳೆಯ ಅಭಾವ ಹಾಗೂ ಎಲ್ ನಿನೋ ಪರಿಣಾಮದಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ಮುಂಗಾರು ಬೆಳೆಯನ್ನು ಬೆಳೆಯದಂತೆ ನೀರಾವರಿ ಇಲಾಖೆ ಮನವಿ
ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್: ಕಾರ್ಪೊರೇಟ್ ವಲಯದ ನಿರೀಕ್ಷೆಗೆ ತಕ್ಕಂತೆ ಕೌಶಲ್ಯ ಬೆಳೆಸಲು ಜವಾಹರಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜಿನಲ್ಲಿ 24 ಗಂಟೆಗಳ ರಾಷ್ಟ್ರಮಟ್ಟದ ಮೇಧಾದೃಷ್ಟಿ ಹ್ಯಾಕಥಾನ್
ಕರಾವಳಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ: ನಟ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ‘ಕರಾವಳಿ’ ಚಿತ್ರವು ಇದೇ ಜುಲೈ 24 ರಂದು ರಾಜ್ಯಾದ್ಯಂತ ರಿಲೀಸ್
ಮಧ್ಯಸ್ಥಿಕೆ ತರಬೇತಿ ಕಾರ್ಯಾಗಾರ ಉದ್ಘಾಟನೆ: ಶಿವಮೊಗ್ಗದಲ್ಲಿ ನೂತನ ಮಧ್ಯಸ್ಥಿಕೆದಾರರಿಗೆ 40 ಗಂಟೆಗಳ ತರಬೇತಿ ಕಾರ್ಯಾಗಾರ ಆರಂಭವಾಗಿದ್ದು, ಕೌಟುಂಬಿಕ ನ್ಯಾಯಾಲಯದ ಹಲವು ಪ್ರಕರಣಗಳು ಮಧ್ಯಸ್ಥಿಕೆ ಮೂಲಕ ಇತ್ಯರ್ಥ
ಎಲ್ ನಿನೋ ಹವಾಮಾನ ವೈಪರೀತ್ಯದ ಭೀತಿ: ಜಾಗತಿಕ ಮಟ್ಟದ ಎಲ್ ನಿನೋ ಪರಿಣಾಮ ಎದುರಿಸಲು ಕರ್ನಾಟಕ ಸರ್ಕಾರದಿಂದ ಸಮಗ್ರ ಮುನ್ನೆಚ್ಚರಿಕೆ ಕಾರ್ಯತಂತ್ರ ಹಾಗೂ ಜಲ ಸಂರಕ್ಷಣಾ ಅಭಿಯಾನ
ಮಹಿಳೆ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ: ಜಾಗದ ವಿಚಾರವಾಗಿ ಜಗಳ ತೆಗೆದು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಶಿವಮೊಗ್ಗದ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ
ತೀರ್ಥಹಳ್ಳಿ ಪಿಎಲ್ಸಿಸಿ ಬ್ಯಾಂಕ್‌ನಿಂದ ದಾಖಲೆಯ ವಹಿವಾಟು: ತೀರ್ಥಹಳ್ಳಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 682.76 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು, ಷೇರುದಾರರಿಗೆ ಶೇಕಡಾ 10 ರಷ್ಟು ಡಿವಿಡೆಂಡ್ ಘೋಷಣೆ
ಭಾರತ್ ಜೋಡೋ ಯುವಕ ಸಂಘಗಳ ಸ್ಥಾಪನೆಗೆ ಪೂರ್ವಸಿದ್ಧತೆ: ಯುವಜನರಲ್ಲಿ ನಾಯಕತ್ವ ಗುಣ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ರಾಜ್ಯ ಸರ್ಕಾರದಿಂದ ‘ಭಾರತ್ ಜೋಡೋ ಯುವಕ ಸಂಘ’ ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.
ಇವತ್ತಿನ ಇ ಪತ್ರಿಕೆಯು ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು! ಅಥವಾ ಆನ್ಲೈನ್ನಲ್ಲಿಯೇ ಓದ ಬಹುದು, ಈ ಲಿಂಕ್ ಹಾಗೂ ಪಿಡಿಎಫ್ ವಿವ್ಹ್ ಕೆಳಗಿದೆ.
ಮಲೆನಾಡು ಟುಡೆ ಪೇಪರ್ ಈ ಪತ್ರಿಕೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ನಲ್ಲಿಯೇ ವೀಕ್ಷಿಸಲು ಇಲ್ಲಿದೆ ಗಮನಿಸಿ ಇ ಪತ್ರಿಕೆಯ ಪಿಡಿಎಫ್ ವೀವ್ಹ್
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
