ಶಿಕಾರಿಪುರದ ದಾಳಿಕೋರ ಚಿರತೆಯ ಶ*ವ ಪತ್ತೆ! ಮೂವರ ಮೇಲೆ ಅಟ್ಯಾಕ್​ ಮಾಡಿದ್ದ ವನ್ಯಜೀವಿ ಸಾವಿಗೆ ಕಾರಣ ಪ್ರಶ್ನೆ!

ಶಿಕಾರಿಪುರ /ಮಲೆನಾಡು ಟುಡೆ ಸುದ್ದಿ / ಶಿಕಾರಿಪುರದ ತಡಸನಹಳ್ಳಿಯ ಚಿರತೆ ಸಾವನ್ನಪ್ಪಿದೆ. ಕಳೆದ ಒಂದು ವಾರದಲ್ಲಿ ಈ ಚಿರತೆ ಮೂರು ಕಡೆಗಳಲ್ಲಿ ಮನುಷ್ಯರ ಮೇಲೆ ಎರಗಿ ಗಾಯಗೊಳಿಸಿತ್ತು. ಇದೀಗ ಚಿರತೆ ಇದೀಗ ಶವವಾಗಿ ಪತ್ತೆಯಾಗಿದೆ. ಮುತ್ತಗಿ, ತಡಸನಹಳ್ಳಿ ಹಾಗೂ ಅಡಗಂಟಿ ಗ್ರಾಮಗಳಲ್ಲಿ ದಾಳಿ ನಡೆಸಿದ್ದ ಈ ಚಿರತೆಯು, ನಿನ್ನೆ ದಿನ ಅಂದರೆ ಸೋಮವಾರ ಅಡಗಂಟಿ ಗ್ರಾಮದ ಅಡಿಕೆ ತೋಟವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ.

 Shikaripura Leopard That Attacked People Found Dead in Adaganti ACF Gopyanaik suspect hunger and illness and  post-mortem conducted
Shikaripura Leopard That Attacked People Found Dead in Adaganti ACF Gopyanaik suspect hunger and illness and post-mortem conducted

ಚಿರತೆ ದಾಳಿ : ದಾಳಿ ವೇಳೆ ಚಿರತೆಯೊಂದಿಗೆ ಮುತ್ತಣ್ಣನ ಫೈಟ್​ ಹೇಗಿತ್ತು ಗೊತ್ತಾ..?

ಚಿರತೆಯು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅದರ ಚಲನವಲನಗಳ ಮೇಲೆ ಅರಣ್ಯ ಇಲಾಖೆಯ ಸಿಬ್ಬಂದಿ ನಿಗಾ ವಹಿಸಿದ್ದರು. ಹೀಗೆ ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗೆ ಅಡಿಕೆ ತೋಟದಲ್ಲಿ ಚಿರತೆ ಮೃತಪಟ್ಟಿರುವುದು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ವೈದ್ಯಾಧಿಕಾರಿಗಳಾದ ನಿಂಗಪ್ಪ ಹಾಗೂ ಅನಂತ್‌ನಾಯಕ್ ಆಗಮಿಸಿ ಮರಣೋತ್ತರ ಪರೀಕ್ಷೆ ನೆರವೇರಿಸಿದರು. ತದನಂತರ ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಚಿರತೆಯ ಅಂತ್ಯಕ್ರಿಯೆಯನ್ನು ಪೂರೈಸಲಾಯಿತು.

ನಡು ರಸ್ತೆಯಲ್ಲಿ ಚಿರತೆ ಸಾವು! ಬೆನ್ನಲ್ಲೆ ಹೆಚ್ಚಿದ ಆತಂಕ

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಎಸಿಎಫ್ ಗೋಪ್ಯಾನಾಯ್ಕ ಅವರು, ಚಿರತೆಯು ಅಸ್ವಸ್ಥತೆ ಹಾಗೂ ತೀವ್ರ ಹಸಿವಿನ ಕಾರಣದಿಂದಲೇ ಸಾವನ್ನಪ್ಪಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಜಾವೆದ್ ಅಂಗಡಿ, ಪರಶುರಾಮ್, ಎಸ್.ಪಿ. ಕಿರಣ್, ರಾಘವನ್, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಸಂತೋಷ್, ಸುನಿಲ್, ನಿಸರ್ಗ ಕಂಜರ್ವೇಟಿವ್ ಟ್ರಸ್ಟ್‌ನ ಜಿ.ಎನ್.ಅರುಣ್‌ ಕುಮಾ‌ರ್ ಹಾಗೂ ಸುಣ್ಣದಕೊಪ್ಪ ಪಿಡಿಒ ಕೊಟ್ರೇಶ್‌ ಉಪಸ್ಥಿತರಿದ್ದರು.

 Shikaripura Leopard That Attacked People Found Dead in Adaganti ACF Gopyanaik suspect hunger and illness and  post-mortem conducted
Shikaripura Leopard That Attacked People Found Dead in Adaganti ACF Gopyanaik suspect hunger and illness and post-mortem conducted

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

Shikaripura Leopard That Attacked People Found Dead in Adaganti ACF Gopyanaik suspect hunger and illness and post-mortem conducted