SHIVAMOGGA NEWS TODAY

ಚಿರತೆ ದಾಳಿ : ದಾಳಿ ವೇಳೆ ಚಿರತೆಯೊಂದಿಗೆ ಮುತ್ತಣ್ಣನ ಫೈಟ್​ ಹೇಗಿತ್ತು ಗೊತ್ತಾ..?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿಕಾರಿಪುರ: ತಾಲೂಕಿನ ತಡಸನಹಳ್ಳಿ, ಅಡಗಂಟಿ ಹಾಗೂ ಮುತ್ತಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಶನಿವಾರ ಚಿರತೆಯೊಂದು ಸರಣಿ ದಾಳಿ ನಡೆಸಿದ್ದು, ಒಂದೇ ದಿನ ಮೂವರು ಗ್ರಾಮಸ್ಥರನ್ನು ಗಾಯಗೊಳಿಸಿ ಆತಂಕ ಸೃಷ್ಟಿಸಿದೆ. ಈ ಪೈಕಿ ರೈತರೊಬ್ಬರು ಚಿರತೆಯೊಂದಿಗೆ ಸೆಣಸಾಡಿ ಪ್ರಾಣ ಉಳಿಸಿಕೊಂಡ ಘಟನೆ ಮೈನವಿರೇಳಿಸುವಂತಿದೆ. 

ರಂಜಾನ್ ಸಂಭ್ರಮ. ಶಿವಮೊಗ್ಗದಲ್ಲಿ ಹೇಗಿತ್ತು ಆಚರಣೆ

ತಡಸನಹಳ್ಳಿಯ ಮುತ್ತಣ್ಣ ಎಂಬವರು ಬೆಳಿಗ್ಗೆ 7:30ಕ್ಕೆ ಗದ್ದೆಗೆ ನೀರು ಹಾಯಿಸಲು ತೆರಳಿದ್ದಾಗ ಚಿರತೆ ಏಕಾಏಕಿ ಅವರ ಮೇಲೆರಗಿದೆ. ಈ ಕ್ಷಣದ ಬಗ್ಗೆ ಅವರ ಪತ್ನಿ ಮಾಹಿತಿ ನೀಡಿದ್ದು, ಚಿರತೆ ನೇರವಾಗಿ ಕುತ್ತಿಗೆಗೆ ಬಾಯಿ ಹಾಕಲು ಬಂದಾಗ ಮುತ್ತಣ್ಣ ಎಡಗೈಯನ್ನು ಅಡ್ಡ ಕೊಟ್ಟಿದ್ದಾರೆ. ಚಿರತೆ ಕೈಯನ್ನು ಕಚ್ಚಿ ಹಿಡಿದಾಗ ಧೃತಿಗೆಡದ ಅವರು, ತಮ್ಮ ಬಳಿಯಿದ್ದ ಟವಲ್ ಅನ್ನು ಚಿರತೆಯ ಕೊರಳಿಗೆ ಸುತ್ತಿ ಬಿಗಿದಿದ್ದಾರೆ. ಬಳಿಕ ಅದನ್ನು ಕಾಲಿನಿಂದ ಒದ್ದು ಎಸೆದು ಅಲ್ಲಿಂದ ಓಡಿ ಬಂದು ಜೀವ ಉಳಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ. ಮುತ್ತಣ್ಣ ಅವರ ಕೈಗೆ ಗಂಭೀರ ಗಾಯವಾಗಿದ್ದು, ಪ್ಲಾಸ್ಟಿಕ್ ಸರ್ಜರಿಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮತ್ತೊಂದು ಘಟನೆಯಲ್ಲಿ, ಅಡಗಂಟಿ ಗ್ರಾಮದ ಸುದೀಪ್ ಎಂಬುವವರು ಮೇವು ತರಲು ಹೋದಾಗ ಚಿರತೆ ದಾಳಿ ಮಾಡಿದೆ. ಇವರೂ ಕೂಡ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ, ಬೈಕ್‌ನಲ್ಲಿ ತೆರಳುತ್ತಿದ್ದ ಹೂವ್ಯನಾಯ್ಕ್ ಎಂಬುವವರ ಮೇಲೂ ಚಿರತೆ ಜಿಗಿದಿದ್ದು, ಅದೃಷ್ಟವಶಾತ್ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. 

Shikaripura Farmer Fights Off Leopard With a Towel

Shikaripura Farmer Fights Off Leopard With a Towel
Shikaripura Farmer Fights Off Leopard With a Towel
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.