ಶಿವಮೊಗ್ಗ: ಫಾರ್ಮ್ ಹೌಸ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಹಸುಗಳ ಕಳ್ಳತನ

ಹಂಚಿಕೊಳ್ಳಿ
WhatsApp Facebook X Telegram
Shivamogga Crime Shivamogga Crime Shopkeeper Shivamogga Crime Bolero Pick Up Shimoga House Robbery Cloth Merchant Gold Coin Scam Shimoga Cow Theft Major thjeft case in Shivamogga Srirampura 4.2 Lakh Worth Gold and Cash Stolen in tunga nagara police station
Shivamogga Crime Shivamogga Crime Shopkeeper Shivamogga Crime Bolero Pick Up Shimoga House Robbery Cloth Merchant Gold Coin Scam Shimoga Cow Theft Burglary in Shivamogga Areca Nut Theft

Shimoga Cow Theft ಶಿವಮೊಗ್ಗ: ನಗರದ ಹೊರವಲಯದ ಗಾಡಿಕೊಪ್ಪ ಸಮೀಪದ ಮಲಿಗೇನಹಳ್ಳಿಯಲ್ಲಿರುವ ಹಸುಗಳ ಫಾರ್ಮ್‌ಗೆ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಎರಡು ಹೈಬ್ರಿಡ್ ಹಸುಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋವಾದಲ್ಲಿ ಆ ದಂಧೆಯ ರಾಕೆಟ್​ ಬಯಲು! ಶಿವಮೊಗ್ಗ ನಿವಾಸಿ ಮಾಸ್ಟರ್​ ಮೈಂಡ್ ಅರೆಸ್ಟ್!

Shimoga Cow Theft ಘಟನೆಯ ವಿವರ

ಮಲಿಗೇನಹಳ್ಳಿಯ  ವ್ಯಕ್ತಿಯೊಬ್ಬರು ಹಸು ಮತ್ತು ಎಮ್ಮೆಗಳ ಫಾರ್ಮ್ ನಡೆಸುತ್ತಿದ್ದು, ಹಸುಗಳನ್ನು ಕಟ್ಟಲು ಪ್ರತ್ಯೇಕ ಶೆಡ್ ಹಾಗೂ ಮೇಯಲು ತೋಟದ ವ್ಯವಸ್ಥೆ ಮಾಡಿದ್ದರು. ಮಾರ್ಚ್ 19ರ ಮಧ್ಯರಾತ್ರಿ 12:15ರ ಸುಮಾರಿಗೆ ಮಾಲೀಕರು ಫಾರ್ಮ್‌ನಲ್ಲಿದ್ದಾಗ ಎಲ್ಲಾ ಜಾನುವಾರುಗಳು ಶೆಡ್‌ನಲ್ಲಿಯೇ ಇದ್ದವು. ಆದರೆ, ರಾತ್ರಿ ಎಲ್ಲರೂ ನಿದ್ರೆಗೆ ಜಾರಿದ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. 

ಮರುದಿನ ಬೆಳಗ್ಗೆ 6 ಗಂಟೆಗೆ ಮಾಲೀಕರು ಫಾರ್ಮ್‌ಗೆ ಬಂದು ನೋಡಿದಾಗ ಓಪನ್ ಶೆಡ್‌ನಲ್ಲಿದ್ದ ಎರಡು ಹಸುಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಸುಮಾರು 80,000 ರೂ. ಮೌಲ್ಯದ ಒಂದು ಹೆಚ್.ಎಫ್ (HF) ತಳಿಯ ಹಸು ಹಾಗೂ 40,000 ರೂ. ಬೆಲೆಬಾಳುವ ಒಂದು ಜೆರ್ಸಿ ತಳಿಯ ಹಸು ಕಳ್ಳತನವಾಗಿವೆ. ನಾಪತ್ತೆಯಾದ ಹಸುಗಳ ಒಟ್ಟು ಅಂದಾಜು ಮೌಲ್ಯ 1.20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 

ಹಸುಗಳು ನಾಪತ್ತೆಯಾದ ತಕ್ಷಣ ಮಾಲೀಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ತೋಟಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ತಡವಾಗಿ ತುಂಗಾನಗರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. 

Shimoga Cow Theft HF and Jersey Cows Stolen

Shimoga Cow Theft Major thjeft case in Shivamogga Srirampura 4.2 Lakh Worth Gold and Cash Stolen in tunga nagara police station
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor