ಶಿವಮೊಗ್ಗ : ಮೇ 1ರಿಂದ ಇಂಡಿಗೋ ವಿಮಾನ ಸೇವೆ ಸ್ಥಗಿತ ಆಗುತ್ತಾ ?

ಶಿವಮೊಗ್ಗ:ಶಿವಮೊಗ್ಗದಿಂದ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ದೇಶದ 131 ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಏಪ್ರಿಲ್ ಅಂತ್ಯಕ್ಕೆ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಮುನ್ಸೂಚನೆ ನೀಡಿದೆ. ಈ ಬಗ್ಗೆ ಬಹಳಷ್ಟು ಚರ್ಚೆ ಆರಂಭವಾಗಿದೆ.

ಶಿವಮೊಗ್ಗ: ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ ; ಮಿಸ್ ಮಾಡ್ಕೋಬೇಡಿ!

ರಾಷ್ಟ್ರೀಯ ಮಾಧ್ಯಮಗಳ ಮಾಹಿತಿಯ ಪ್ರಕಾರ, ಪ್ರಸ್ತುತ ಇಂಡಿಗೋ ಸಂಸ್ಥೆಯು ಏಪ್ರಿಲ್ 30ರ ವರೆಗಷ್ಟೇ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡಿದ್ದು, ಮೇ 1ರಿಂದ ಯಾವುದೇ ಬುಕ್ಕಿಂಗ್ ಲಭ್ಯವಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Shimoga IndiGo Flight Services to Stop from May 1
Shimoga IndiGo Flight Services to Stop from May 1

ಕಾರಣವೇನು?

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದ ಹಿನ್ನೆಲೆಯಲ್ಲಿ ಡಿಜಿಸಿಎ (DGCA) ವಿಮಾನಯಾನ ನಿಯಮಗಳನ್ನು ಅತ್ಯಂತ ಕಠಿಣಗೊಳಿಸಿದೆ. ಪೈಲಟ್‌ಗಳ ಕೆಲಸದ ಅವಧಿ ಮತ್ತು ವಿಮಾನಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ನಿಯಮಗಳಿಂದಾಗಿ ಇಂಡಿಗೋ ಸಂಸ್ಥೆಗೆ ಪೈಲಟ್‌ಗಳು ಕೊರತೆ ಎದುರಾಗಿದೆ. ಈ ತಾಂತ್ರಿಕ ಕಾರಣದಿಂದಾಗಿ ಸಂಸ್ಥೆಯು ಸಣ್ಣ ನಗರಗಳಿಗೆ ನೀಡುತ್ತಿದ್ದ ಎಟಿಆರ್ ವಿಮಾನ ಸೇವೆಗಳನ್ನು ಕಡಿತಗೊಳಿಸಲು ಮುಂದಾಗಿದೆ ಎನ್ನಲಾಗಿದೆ. 

Shimoga IndiGo Flight Services to Stop from May 1

Shimoga IndiGo Flight Services to Stop from May 1
Shimoga IndiGo Flight Services to Stop from May 1
shivamogga car decor sun control house
shivamogga car decor sun control house