SHIVAMOGGA NEWS TODAY

ಶಿವಮೊಗ್ಗ: ಮಾ. 24ಕ್ಕೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ಅಹೋರಾತ್ರಿ ಬೃಹತ್ ಧರಣಿ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ |  ಶರಾವತಿ ಕಣಿವೆಯ ಸೂಕ್ಷ್ಮ ಪರಿಸರಕ್ಕೆ ಮಾರಕವಾಗಲಿರುವ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆ ಮತ್ತು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ನೇತೃತ್ವದ ರಾಷ್ಟ್ರಭಕ್ತರ ಬಳಗ ಮತ್ತೊಂದು ಹಂತದ ಹೋರಾಟಕ್ಕೆ ಅಣಿಯಾಗಿದೆ. ಈ ಕುರಿತು ಅಹೋರಾತ್ರಿ ಪ್ರತಿಭಟನೆಯನ್ನು ಮಾರ್ಚ್ 24 ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. 

ಶಿವಮೊಗ್ಗ: ಒತ್ತುವರಿ ತೆರವು ನೆಪದಲ್ಲಿ ಫಸಲು ನೀಡುತ್ತಿದ್ದ 300 ಅಡಿಕೆ ಮರಗಳ ನಾಶ; ಮಾಲೀಕನ ಆಕ್ರೋಶ

ಇಂದು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರೊ. ಕುಮಾರಸ್ವಾಮಿ, ಮಾಹಿತಿ ಹಕ್ಕು ಕಾಯ್ದೆಯಡಿ  ಪಡೆದ ತಜ್ಞರ ಸಮಿತಿಯ ವರದಿಯು ಈ ಯೋಜನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ ಎಂದು ತಿಳಿಸಿದರು. ಈಗಾಗಲೇ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ದಾಖಲಾಗಿದ್ದು, ನ್ಯಾಯಾಲಯವು ಜೂನ್ 15ರೊಳಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದೆ. 

ಈ ಪಕ್ಷೇತರ ಪ್ರತಿಭಟನೆಯು ಮಾರ್ಚ್ 24ರ ಬೆಳಿಗ್ಗೆ 9:30 ರಿಂದ ಆರಂಭವಾಗಿ ಮಾರ್ಚ್ 25ರ ಬೆಳಿಗ್ಗೆ 9:30 ರವರೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಮುಂಭಾಗ ನಡೆಯಲಿದೆ. ಈ ಐತಿಹಾಸಿಕ ಧರಣಿಯಲ್ಲಿ ಬೆಕ್ಕಿನ ಕಲ್ಮಠದ ಡಾ. ಮುರುಘ ರಾಜೇಂದ್ರ ಮಹಾಸ್ವಾಮಿಗಳು, ವಿನಯ್ ಗುರೂಜಿ ಸೇರಿದಂತೆ ರಾಜ್ಯದ ಪ್ರಮುಖ ಮಠಾಧೀಶರು, ಎ.ಟಿ. ರಾಮಸ್ವಾಮಿ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪ ಸೇರಿದಂತೆ 500ಕ್ಕೂ ಹೆಚ್ಚು ಗಣ್ಯರು ಭಾಗವಹಿಸಲಿದ್ದಾರೆ ಎಂದರು. 

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಜನರು ಮತ್ತು ತಜ್ಞರು ಈ ಯೋಜನೆಯನ್ನು ಬೇಡವೆಂದಿದ್ದರೂ ಸರ್ಕಾರ ಸುಮಾರು 10,000 ಕೋಟಿ ರೂಪಾಯಿಗಳ ಭ್ರಷ್ಟಾಚಾರಕ್ಕಾಗಿ ಹಠ ಹಿಡಿದು ಯೋಜನೆ ಮುಂದುವರಿಸುತ್ತಿದೆ. ಕೆಪಿಸಿ (KPC) ಅಧಿಕಾರಿಗಳ ಮೇಲೆ ಸಚಿವ ಜಾರ್ಜ್ ಅವರ ಒತ್ತಡವಿದೆ ಎಂದು ಗಂಭೀರ ಆರೋಪ ಮಾಡಿದರು. ಪ್ರತಿಭಟನೆಯ ನಂತರ ಬೃಹತ್ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.

Sharavathi Project All Night Protest shimogga

Sharavathi Project  Sagara PoliceShimoga Court Shivamogga Careers Ripponpete Shivamogga Unknown Body Found Near Tuppur Hybrid Vegetable Seeds Shikaripura Laborer Dies Shivamogga Court Bhadravati Court Unidentified Man Soraba Ghana Detains Bhadravathi Arson Anandapura Shivamogga Shivaratri Rules Swathantryada Ota Court Orders Walk-in Interview Shivamogga Court KFD Fatality Shivamogga Round up
Sharavathi Project
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.