SHIVAMOGGA NEWS TODAY

ಶಿವಮೊಗ್ಗ: ಒತ್ತುವರಿ ತೆರವು ನೆಪದಲ್ಲಿ ಫಸಲು ನೀಡುತ್ತಿದ್ದ 300 ಅಡಿಕೆ ಮರಗಳ ನಾಶ; ಮಾಲೀಕನ ಆಕ್ರೋಶ

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shimoga ಶಿವಮೊಗ್ಗ:ತಾಲ್ಲೂಕಿನ ಮಂಡೇನಕೊಪ್ಪದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ್ದು, ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳನ್ನುತೆರುವುಗೊಳಿಸಿದ್ದಾರೆ. ಆದರೆ ಈ ವಿಚಾರದಲ್ಲಿ ಅತಿಕ್ರಮಣ ತೆರವು ಸರಿಯಲ್ಲ ತೋಟದ ಮಾಲೀಕರು ಆರೋಪ ಮಾಡಿದ್ದಾರೆ. ಫಸಲು ನೀಡಲು ಆರಂಭಿಸಿದ್ದ ಮರಗಳನ್ನು ಏಕಾಏಕಿ ನೆಲಸಮ ಮಾಡಿರುವುದು ಆಕ್ರೋಶಕ್ಕೆ ಗುರಿಮಾಡಿದೆ. ಅಧಿಕಾರಿಗಳ ಕಾರ್ಯಾಚರಣೆ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಲ್ಲಿ ನಾಳೆಯಿಂದ ಹೋಟೆಲ್ ಬಂದ್?

Shimoga ಘಟನೆಯ ಹಿನ್ನೆಲೆ

ಒತ್ತುವರಿ ತೆರವಿನ ವಿಚಾರದಲ್ಲಿ ಸಚಿವ ಮಧುಬಂಗಾರಪ್ಪರವರ ಸ್ಪಷ್ಟ ಸೂಚನೆ ಇದೆ.ಈ ಮಧ್ಯೆ ಮಂಡೇನಕೊಪ್ಪದ ಸರ್ವೇ ನಂಬರ್ 241/1ರಲ್ಲಿರುವ ಈ ಜಾಗಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.ಕೆರೆ ಒತ್ತುವರಿ ಮಾಡಿ ತೋಟ ಕಟ್ಟಿದ್ದಾರೆ ಎಂದು ಆರೋಪದ ಅಡಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. 

ಈ ಮಧ್ಯೆ ತೋಟದ ಮಾಲೀಕರು ಬೇರೆಯದ್ದೆ ಆರೋಪ ಮಾಡುತ್ತಿದ್ದಾರೆ. ತೋಟದ ಮಾಲೀಕ ರುದ್ರೇಶ್ 2000ನೇ ಇಸವಿಯಲ್ಲಿ ಸರ್ಕಾರವೇ ಸರ್ಕಾರಿ ಜಾಗ ಎಂದು ಪಹಣಿ (RTC) ಮಾಡಿಕೊಟ್ಟಿತ್ತು. ಅಂದಿನಿಂದ ಈ ಭೂಮಿಯಲ್ಲಿ ಅವರು ಅಡಿಕೆ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದೆ. ಆದರೆ, ಇತ್ತೀಚೆಗೆ ಕೆಲವು ವ್ಯಕ್ತಿಗಳು ಈ ಜಾಗಕ್ಕೆ ನಮ್ಮ ಬಳಿ ಕೈ ಪಹಣಿ ಇದೆ ಎಂದು ಹಕ್ಕು ಸಾಧಿಸತೊಡಗಿದ್ದರು. ಅಷ್ಟೇ ಅಲ್ಲದೆ, ದಾಖಲೆಗಳಲ್ಲಿ ಇದು ಕೆರೆ ಎಂದು ನಮೂದಾಗಿದೆ, ನೀವು ಇದನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದೀರಿ ಎಂದು ದೂರಿದ್ದರು. ಈ ವಿವಾದದ ಹಿನ್ನೆಲೆಯಲ್ಲಿ ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಸರ್ವೇ ನಡೆಸಿದ್ದರು. ಆ ಸಮಯದಲ್ಲಿ ಕೆರೆ ಇದ್ದ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಅಧಿಕಾರಿಗಳೇ ಅಭಿಪ್ರಾಯಪಟ್ಟಿದ್ದರು ಅಂತಾ ತಿಳಿಸಿದ್ದಾರೆ.

ಇಷ್ಟೆ ಅಲ್ಲದೆ ಕಳೆದ ಮಾರ್ಚ್ 03 ರಂದು ಟ್ರಂಚ್ ಹೊಡೆಯುವ ನೆಪದಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳು ಜೆಸಿಬಿ ಬಳಸಿ ಏಕಾಏಕಿ ದಾಳಿ ನಡೆಸಿದ್ದಾರೆ. ಯಾವುದೇ ನೋಟಿಸ್ ನೀಡದೆ ಸುಮಾರು 300ಕ್ಕೂ ಹೆಚ್ಚು ಫಸಲು ಬರುವ ಅಡಿಕೆ ಮರಗಳನ್ನು ಕಿತ್ತು ಹಾಕಲಾಗಿದೆ ಎಂದು ರುದ್ರೇಶ್ ಆರೋಪಿಸಿದ್ದಾರೆ. 

ಒಟ್ಟಿನಲ್ಲಿ ತೋಟದ ಮಾಲೀಕನ ಮುನ್ನೂರುಕ್ಕೂ ಹೆಚ್ಚು ಅಡಿಕೆ ಮರಗಳು ಬುಡಮೇಲಾಗಿದೆ.ಇನ್ನೂ ನಡೆದ ಕಾರ್ಯಾಚರಣೆ ಬಗ್ಗೆ ರೈತ ಸಂಘಟನೆಗಳು ಸಹ ಆಕ್ಷೇಪ ವ್ಯಕಪಡಿಸಿದೆ. ಪ್ರಕರಣದ ಹಿಂದೆ ಕಾಣದ ಕೈಗಳು ಇವೆಯಾ ಎಂಬ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Shimoga 300 Areca Trees Cleared in Mandenakoppa

Shimoga 300 Areca Trees Cleared in Mandenakoppa
Shimoga 300 Areca Trees Cleared in Mandenakoppa
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.