ಶಿವಮೊಗ್ಗ : ಫ್ಯೂಯೆಲ್ಸ್ ಬಳಿ ಕಿಲೋಮೀಟರ್ ಉದ್ದದ ಕ್ಯೂ: ಗ್ಯಾಸ್ ಇಲ್ಲದೆ ಕಂಗಾಲಾದ ಚಾಲಕರು!

ಹಂಚಿಕೊಳ್ಳಿ
WhatsApp Facebook X Telegram
Shimoga Auto Gas Crisis Prices Surge War
Shimoga Auto Gas Crisis Prices Surge War

Shimoga Auto Gas Crisis ಶಿವಮೊಗ್ಗ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮಗಳು ಶಿವಮೊಗ್ಗದ ಜನಸಾಮಾನ್ಯರ ಮೇಲೆ ಪರಿಣಾಮ ಬೀರತೊಡಗಿವೆ. ಅಂತರಾಷ್ಟ್ರೀಯ ಮಟ್ಟದ ಉದ್ವಿಗ್ನತೆಯಿಂದಾಗಿ ದೇಶಾದ್ಯಂತ ಇಂಧನ ಪೂರೈಕೆಯಲ್ಲಿ ಏರುಪೇರಾಗಿದ್ದು,ಶಿವಮೊಗ್ಗ ನಗರದಲ್ಲಿ ಆಟೋ ಗ್ಯಾಸ್ ಕೊರತೆ ತೀವ್ರಗೊಂಡಿದೆ. 

ಶಿವಮೊಗ್ಗ: ಬೈಕ್​ ಅಪಘಾತ ,ಬಿಟಿವಿ ವರದಿಗಾರ ಅನಿಲ್ ನಿಧನ

ನಗರದ ಕಮರ್ಷಿಯಲ್ ಸಿಲಿಂಡರ್‌ಗಳ ಬೆಲೆ ಏರಿಕೆಯ ಬೆನ್ನಲ್ಲೇ ಈಗ ಆಟೋ ರಿಕ್ಷಾಗಳಿಗೆ ಬಳಸುವ ಎಲ್‌.ಪಿ.ಜಿ ಗ್ಯಾಸ್‌ಗೂ ಅಭಾವ ಸೃಷ್ಟಿಯಾಗಿದೆ. ಇಂದು ಶಿವಮೊಗ್ಗದ ಕೆಇಬಿ ಸರ್ಕಲ್ ಬಳಿ ಇರುವ ಸಾಯಿ ಫ್ಯೂಯೆಲ್ಸ್ ಸೇರಿದಂತೆ ನಗರದ ಪ್ರಮುಖ ಗ್ಯಾಸ್ ಬಂಕ್‌ಗಳ ಮುಂದೆ ಆಟೋ ಚಾಲಕರು ಗಂಟೆಗಟ್ಟಲೆ ಕ್ಯೂ ನಿಂತಿರುವುದು ಕಂಡುಬಂದಿದೆ.

ಗ್ಯಾಸ್ ಕೊರತೆಯ ನಡುವೆ ದರ ಏರಿಕೆಯು ಚಾಲಕರ ಕೈ ಸುಡುತ್ತಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ ಆಟೋ ಗ್ಯಾಸ್ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈ ಹಿಂದೆ ಪ್ರತಿ ಲೀಟರ್‌ಗೆ 58 ರಿಂದ 60 ರೂಪಾಯಿ ಇದ್ದ ದರವು, ಈಗ ದಿಢೀರ್ ಆಗಿ 80 ರಿಂದ 82 ರೂಪಾಯಿಗೆ ಏರಿಕೆಯಾಗಿದೆ. ಈ ಅನಿರೀಕ್ಷಿತ ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರ ದೈನಂದಿನ ಆದಾಯಕ್ಕೆ ಕೊಡಲಿ ಏಟು ಬಿದ್ದಂತಾಗಿದೆ. 

Shimoga Auto Gas Crisis Prices Surge War

Shimoga Auto Gas Crisis Prices Surge War
Shimoga Auto Gas Crisis Prices Surge War

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor