ಕೆಎಸ್​ಆರ್​​ಟಿಸಿ ಬಸ್​ನಲ್ಲಿ ಗಂಡಸರಿಗೆ ಸೀಟಿಲ್ಲ, ಸಿಎಂಗೆ ಮನವಿ?

ಹಂಚಿಕೊಳ್ಳಿ
WhatsApp Facebook X Telegram
KSRTC Free Bus Men Facing Travel Hell
KSRTC Free Bus Men Facing Travel Hell

ಶಿವಮೊಗ್ಗ :  ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದು ಶ್ಲಾಘನೀಯವಾದರೂ, ಇದರಿಂದ ಪುರುಷ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಸಾಮಾಜಿಕ ಅಭಿವೃದ್ಧಿ ರಂಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ.ಎಲ್. ರಂಗನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

 ಶಿವಮೊಗ್ಗ : ಮಹಿಳಾ ಕಲಾವಿದರಿಗೆ ಇಲ್ಲಿದೆ ನೋಡಿ ಸುವರ್ಣಾವಕಾಶ, ಪ್ರಥಮ ಬಹುಮಾನ 8 ಸಾವಿರ, ಏನಿದು ಸ್ಪರ್ಧೆ

ಈ ಕುರಿತು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸರ್ಕಾರಿ ಬಸ್ಸುಗಳಲ್ಲಿ ಪುರುಷರಿಗೆ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಆಸನ ಸಿಗುವುದೇ ದುಸ್ತರವಾಗಿದೆ. ಬಸ್‌ಗಳು ಸಂಪೂರ್ಣವಾಗಿ ಮಹಿಳಾ ಪ್ರಯಾಣಿಕರಿಂದ ತುಂಬಿರುತ್ತಿದ್ದು, ಗಂಡಸರು ಗಂಟೆಗಟ್ಟಲೆ ನಿಂತು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ಈ ನರಕಯಾತನೆಗೆ ಸರ್ಕಾರ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ದೂರದ ಪ್ರಯಾಣ ಮಾಡುವ ವಯಸ್ಸಾದವರು, ಮಧುಮೇಹ ಹಾಗೂ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆ ಇರುವ ಪುರುಷರು ನಿಂತುಕೊಂಡು ಪ್ರಯಾಣಿಸುವುದು ಅಸಾಧ್ಯದ ಮಾತು. ಸರ್ಕಾರದ ಉದ್ದೇಶ ಉತ್ತಮವಾಗಿದ್ದರೂ, ಪ್ರಾಯೋಗಿಕವಾಗಿ ಇದರ ದುರುಪಯೋಗವಾಗುತ್ತಿದೆ. ಸಾರಿಗೆ ಸಚಿವರು ಈ ಗಂಭೀರ ಸಮಸ್ಯೆಯನ್ನು ಗಮನಿಸಿ ತಕ್ಷಣವೇ ಮಾರ್ಪಾಡುಗಳನ್ನು ಮಾಡಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಸರ್ಕಾರವು ಪುರುಷ ಪ್ರಯಾಣಿಕರ ಹಿತರಕ್ಷಣೆಗಾಗಿ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಹಾಗೆಯೇ  ಈ ಕುರಿತು ಸಿಎಂ ಸಿದ್ದರಾಮಯ್ಯರಿಗೆ ಮನವಿ ಸಲ್ಲಿಸಲಾಗುವುದು ಎಂದರು.

KSRTC Free Bus Men Facing Travel Hell


KSRTC Free Bus Men Facing Travel Hell

KSRTC Free Bus Men Facing Travel Hell

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor