ಮಲೆನಾಡು ಟುಡೆ ಸುದ್ದಿ / ರಾಜ್ಯದ ವಿವಿಧ ಕಾರಾಗೃಹಗಳಿಂದ 30 ಜೀವಾವಧಿ ಶಿಕ್ಷೆ ಕೈದಿಗಳ ಬಿಡುಗಡೆಗೆ ಸರ್ಕಾರ ಆದೇಶ ಹೊರಡಿಸಿದೆ.ಸರ್ಕಾರದ ಆದೇಶ ಪ್ರತಿಯು ಮಲೆನಾಡು ಟುಡೆಗೆ ಲಭ್ಯವಾಗಿದ್ದು, ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 30 ಮಂದಿ ಕೈದಿಗಳನ್ನು ಅವರ ಸನ್ನಡತೆಯ ಆಧಾರದ ಮೇಲೆ ಅವಧಿಗೂ ಮುನ್ನವೇ ಬಿಡುಗಡೆ ಮಾಡಲಾಗುತ್ತಿದೆ.ಈ ಪೈಕಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಇಬ್ಬರು ಕೈದಿಗಳಿದ್ದಾರೆ.

ಈ ಸಂಬಂಧ ಜೀವಾವಧಿ ಶಿಕ್ಷೆ ಕೈದಿಗಳ ಪರಿಶೀಲನಾ ಸಮಿತಿಯ (ಎಲ್.ಸಿ.ಆರ್.) ಶಿಫಾರಸುಗಳನ್ನು ಆಧರಿಸಿ ಅವಧಿಗೂ ಮುನ್ನವೇ ಬಿಡುಗಡೆ ಮಾಡಲಾಗುವ ಕೈದಿಗಳ ಪಟ್ಟಿ ತಯಾರು ಮಾಡಲಾಗಿದೆ. ಸಂವಿಧಾನದ 161ನೇ ವಿಧಿಯ ಅಡಿಯಲ್ಲಿ ರಾಜ್ಯಪಾಲರ ಅನುಮೋದನೆಯನ್ನು ಪಡೆದುಕೊಂಡು ಬುಧವಾರ ರಾಜ್ಯ ಸರ್ಕಾರ 30 ಜೀವಾವಧಿ ಕೈದಿಗಳ ಬಿಡುಗಡೆಗೆ ಅಧಿಕೃತ ಆದೇಶವನ್ನು ನೀಡಿದೆ.
ಜೀವಾವಧಿ ಶಿಕ್ಷೆ ಕೈದಿಗಳ ಪರಿಶೀಲನಾ ಸಮಿತಿಯು ಒಟ್ಟು 54 ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದೆ. ಅಂತಿಮವಾಗಿ 30 ಜೀವಾವಧಿ ಕೈದಿಗಳ ಪಟ್ಟಿ ರಿಲೀಸ್ ಮಅಢಿದೆ. ಇನ್ನೂ 30 ಜೀವಾವಧಿ ಕೈದಿಗಳ ಪೈಕಿ ಮೂವರು ಮಹಿಳಾ ಕೈದಿಗಳಾಗಿದ್ದು ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗದಲ್ಲಿರುವ ಮಹಿಳಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.
- ಇನ್ನೂ ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹದಿಂದ ಅತಿ ಹೆಚ್ಚು ಅಂದರೆ 14 ಜೀವಾವಧಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
- ಮೈಸೂರು ಕಾರಾಗೃಹದಿಂದ ಓರ್ವ ಮಹಿಳಾ ಜೀವಾವಧಿ ಕೈದಿ ಬಿಡುಗಡೆಯಾಗಲಿದ್ದು, ಬೆಳಗಾವಿ ಕಾರಾಗೃಹದಿಂದ ಓರ್ವ ಮಹಿಳೆ ಸೇರಿದಂತೆ ಇಬ್ಬರು ಜೀವಾವಧಿ ಕೈದಿಗಳು ಬಿಡುಗಡೆಯಾಗಲಿದ್ದಾರೆ.
- ಅದೇ ರೀತಿ, ಕಲಬುರಗಿ ಕಾರಾಗೃಹದಿಂದಲೂ ಓರ್ವ ಮಹಿಳೆ ಸೇರಿದಂತೆ ಇಬ್ಬರು ಜೀವಾವಧಿ ಕೈದಿಗಳು ಬಿಡುಗಡೆಯಾಗಲಿದ್ದಾರೆ. ಶಿವಮೊಗ್ಗ ಕಾರಾಗೃಹದಿಂದ ಓರ್ವ ಜೀವಾವಧಿ ಕೈದಿ ಬಿಡುಗಡೆಯಾಗಲಿದ್ದು ವಿಜಯಪುರ ಕಾರಾಗೃಹದಿಂದ ಐವರು ಜೀವಾವಧಿ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
- ಇದರ ಜೊತೆಗೆ ಬಳ್ಳಾರಿ ಕಾರಾಗೃಹದಿಂದ ಮೂವರು ಜೀವಾವಧಿ ಕೈದಿಗಳು ಹಾಗೂ ಧಾರವಾಡ ಕಾರಾಗೃಹದಿಂದ ಓರ್ವ ಜೀವಾವಧಿ ಕೈದಿ ಬಿಡುಗಡೆಯಾಗಲಿದ್ದಾರೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಶಿವಮೊಗ್ಗ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ, 1 ಲಕ್ಷ ದಂಡ, ಕಾರಣವೇನು ಗೊತ್ತಾ,,?
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
