ಶರಾವತಿ ನಗರ, ಹೊಸಮನೆಯಲ್ಲಿ ಪೊಲೀಸ್ ಡ್ರೋಣ್ ಹಾರಾಟ! ವಿಡಿಯೋ ನೋಡಿ

This Article Written by / ajjimane ganesh / ಜುಲೈ 3, 2026

Drone surveillance in Shivamogga Police keep a close eye on Sharavathi and Hosamane areas.

Drone surveillance | ಮಲೆನಾಡು ಟುಡೆ | ಶಿವಮೊಗ್ಗ | ಜುಲೈ 3, 2026 | ಎಸ್​ಪಿ ನಿಖಿಲ್ ಬಿ ಜಿಲ್ಲೆಗೆ ಬಂದ ಮೇಲೆ ಸೂಕ್ಷ್ಮ ಏರಿಯಾಗಳ ಮೇಲೆ ಡ್ರೋಣ್ ಆಪರೇಷನ್​ ಮೂಲಕ ಹೆಚ್ಚು ನಿಗಾವಹಿಸಲು ವ್ಯವಸ್ಥೆ ಮಾಡಿದ್ದಾರೆ. ಈ ಡ್ರೋಣ್​ ಕಣ್ಗಾವಲಿನ ಮೂಲಕ ಶಿವಮೊಗ್ಗದಲ್ಲಿ ಹಲವು ಪ್ರಕರಣಗಳನ್ನ ದಾಖಲಿಸಲಾಗಿದೆ ಎಂದು ಇತ್ತೀಚೆಗಷ್ಟೆ ಮಾದಕವಸ್ತುಗಳನ್ನು ನಾಶ ಪಡಿಸುವ ಕುರಿತಾಗಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸ್ವತಃ ಎಸ್​ಪಿ ತಿಳಿಸಿದ್ದರು. ಇದೀಗ ಈ ಡ್ರೋಣ್​ ಕಾರ್ಯಾಚರಣೆ ಮುಂದುವರಿದಿದೆ.

ಈ ಬಗ್ಗೆ ಖುದ್ದು ಎಸ್​ಪಿ ನಿಖಿಲ್ ಬಿ ತಮ್ಮ ಶಿವಮೊಗ್ಗ ಎಸ್​ಪಿ ಅಧಿಕೃತ ಎಕ್ಸ್​ ಅಕೌಂಟ್​ ನಲ್ಲಿ ಮಾಹಿತಿ ನೀಡಿದ್ದು ಶಿವಮೊಗ್ಗ ನಗರದ ಶರಾವತಿ ನಗರದ 3ನೇ ಕ್ರಾಸ್ ಹಾಗೂ ಹೊಸಮನೆ 3ನೇ ಕ್ರಾಸ್ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಮೂಲಕ ನಿಗಾವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಭಾಗಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ಡ್ರೋನ್ ಬಳಸಿ ತೀವ್ರ ನಿಗಾ ವಹಿಸಿದೆ. ಡ್ರೋನ್ ತಂತ್ರಜ್ಞಾನದ ಮೂಲಕ ಆಯಕಟ್ಟಿನ ಪ್ರದೇಶಗಳಲ್ಲಿ ಗಸ್ತು ನಡೆಸುತ್ತಿದ್ದಾರೆ ಎಂದು ಎಕ್ಸ್​ನಲ್ಲಿ ತಿಳಿಸಲಾಗಿದೆಯಷ್ಟೆ ಅಲ್ಲದೆ, ಡ್ರೋಣ್​ ಸೆರೆ ಹಿಡಿದ ದೃಶ್ಯಗಳನ್ನು ಸಹ ಪೋಸ್ಟ್ ಮಾಡಲಾಗಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಮತ್ತು ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಡ್ರೋನ್ ಕ್ಯಾಮೆರಾಗಳು ಪೊಲೀಸರಿಗೆ ಹೆಚ್ಚು ಸಹಕಾರಿಯಾಗಿದೆ.

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

#ShivamoggaNews,Drone surveillance,SHIVAMOGGA

ಮುಂದಿನ ಸುದ್ದಿ ಒದಿ