ಶಿವಮೊಗ್ಗ ಜಿಲ್ಲೆಯ ಕುಂಸಿ ಹಾಗೂ ಅರಸಾಳು ಭಾಗದ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಸಿಹಿಸುದ್ದಿ ನೀಡಿದೆ. ಈ ಎರಡು ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಯನ್ನು ಮತ್ತೊಮ್ಮೆ ವಿಸ್ತರಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ವಿಚಾರವಾಗಿ ಹೊಸ ಅಪ್ಡೇಟ್: ನಂಜಯ್ಯನ ಮಠ ಹೇಳಿದ್ದೇನು
ಪ್ರಯಾಣಿಕರ ದಟ್ಟಣೆ ಮತ್ತು ಸ್ಥಳೀಯರ ಬೇಡಿಕೆಯನ್ನು ಪರಿಗಣಿಸಿರುವ ನೈಋತ್ಯ ರೈಲ್ವೆಯು, ಕುಂಸಿ ಮತ್ತು ಅರಸಾಳು ನಿಲ್ದಾಣಗಳಲ್ಲಿ ರೈಲುಗಳ ಸ್ಟಾಪ್‌ಅಪ್ ಅವಧಿಯನ್ನು 2026ರ ಫೆಬ್ರವರಿ 24ರಿಂದ ಆಗಸ್ಟ್ 23ರವರೆಗೆ ಮುಂದುವರೆಸಲು ತೀರ್ಮಾನಿಸಿದೆ.
Railway Halt Extended ವಿಸ್ತರಣೆಯಾದ ರೈಲುಗಳ ವಿವರ ಹೀಗಿದೆ
ಮೊದಲನೆಯದಾಗಿ, ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16227/16228) ಅರಸಾಳು ನಿಲ್ದಾಣದಲ್ಲಿ ನಿಲುಗಡೆ ಪಡೆಯಲಿದೆ. ಎರಡನೆಯದಾಗಿ, ತಾಳಗುಪ್ಪ-ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16205/16206) ಕುಂಸಿ ಮತ್ತು ಅರಸಾಳು ಎರಡೂ ನಿಲ್ದಾಣಗಳಲ್ಲಿ ನಿಯಮಿತವಾಗಿ ನಿಲ್ಲಲಿದೆ.
ಈ ನಿಲುಗಡೆ ಸೌಲಭ್ಯವು ಮುಂದಿನ ಆರು ತಿಂಗಳ ಕಾಲ ಜಾರಿಯಲ್ಲಿರಲಿದ್ದು, ಪ್ರಸ್ತುತ ಇರುವ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
Railway Halt Extended at Arasalu Stations

