Yash’s Toxic Movie ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಿಸಿರುವ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರವು ಮುಂಬರುವ ಮಾರ್ಚ್ 19 ರಂದು ವಿಶ್ವದಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ಇದೀಗ ಚಿತ್ರದ ಟೀಸರ್ ಕೆವಿಎನ್ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಿವಮೊಗ್ಗದ ಕೋಟೆ ಮಾರಿಕಾಂಬಾ ಜಾತ್ರೆಗೆ ಸಿದ್ಧವಾಯ್ತು ಹೊಸ ಸಾಂಗ್: ಹರಕೆ ರೂಪದ ಮಾರಿ ಜಾತ್ರೆ ಆಲ್ಬಂ ಬಿಡುಗಡೆ ಯಾವಾಗ
ಈ ಸಲ ಯುದ್ಧವೇ ಬೇರೆ ಎಂಬ ಪವರ್‌ಫುಲ್ ಡೈಲಾಗ್‌ನೊಂದಿಗೆ ಆರಂಭವಾಗುವ ಈ ಟ್ರೈಲರ್ ನೋಡುಗರ ಗಮನ ಸೆಳೆಯುತ್ತಿದೆ. ಟ್ರೈಲರ್‌ನ ಬಹುತೇಕ ಭಾಗವು ಡಾರ್ಕ್ ಶೇಡ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಸಿಗರೇಟು ಮತ್ತು ಮದ್ಯದ ಅಮಲು ಸೇರಿದಂತೆ ರಕ್ತಸಿಕ್ತವಾದ ದೃಶ್ಯಗಳು ಎದ್ದು ಕಾಣುತ್ತಿವೆ. ಇನ್ನು ಕೆಲವು ಅಡಲ್ಟ್ ಸೀನ್‌ಗಳನ್ನು ಒಳಗೊಂಡಿರುವ ಈ ಚಿತ್ರವು ಪಕ್ಕಾ ಮಾಸ್ ಆಕ್ಷನ್ ಸಿನಿಮಾವಾಗಿ ಮೂಡಿಬಂದಿರುವುದು ನೋಡಬಹುದು. ಇದರ ಜೊತೆಗೆ ಬೃಹದಾಕಾರದ ವಿಎಫ್‌ಎಕ್ಸ್ ಸೆಟ್‌ಗಳನ್ನು ಈ ಟ್ರೈಲರ್‌ನಲ್ಲಿ ಕಾಣಬಹುದಾಗಿದೆ.
ಸುಮಾರು 1.55 ನಿಮಿಷ ಇರುವ ಈ ಟ್ರೈಲರ್‌ನಲ್ಲಿ, ಮೊದಲಿಗೆ ನಟನೊಬ್ಬ ಯಶ್‌ಗೆ ಮತ್ತೊಂದು ಗುಂಪಿನ ಪರಿಚಯ ಮಾಡಿಕೊಡುತ್ತಾ ಸಿಗರೇಟ್ ಹ್ಯಾಷ್’ ಹೊಡೆಯುತ್ತಿರುತ್ತಾನೆ. ನಂತರ ಗಿವ್ ಅಪ್ ರಾಯ ಇಟ್ ಈಸ್ ಓವರ್” ಎಂದು ಹೇಳಿದಾಗ, ಅದಕ್ಕೆ ಪ್ರತಿಯಾಗಿ ಯಶ್ ಅವರು “ಇಟ್ಸ್ ಓವರ್? ಹಿ ಸೇ ಇಟ್ಸ್ ಓವರ್ ಎಂಬ ಖಡಕ್ ಡೈಲಾಗ್ ಹೊಡೆಯುತ್ತಾ ನೀರಿನಲ್ಲಿ ಮುಳುಗೆದ್ದು ಬರುವ ಲುಕ್ ಅದ್ಭುತವಾಗಿದೆ. ಟ್ರೈಲರ್‌ನಲ್ಲಿ ಹೊಡಿ-ಬಡಿ ದೃಶ್ಯಗಳ ಅಬ್ಬರ ಜೋರಾಗಿದ್ದು, ಕೊನೆಯಲ್ಲಿ ಸಂಪೂರ್ಣವಾಗಿ ಬದಲಾದ ಹೇರ್ ಸ್ಟೈಲ್ ಹಾಗೂ ಬಿಯರ್ಡ್ ಲೆಸ್ ಲುಕ್ನಲ್ಲಿ ಯಶ್ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ಅಡಲ್ಟ್ ಸೀನ್‌ಗಳು ಹೆಚ್ಚಿದ್ದ ಕಾರಣ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಈಗ ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಅಂತಹ ಸೀನ್‌ಗಳು ಕಡಿಮೆಯಿದ್ದು, ರಕ್ತಪಾತದ ಆಕ್ಷನ್ ಸೀನ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟಾರೆಯಾಗಿ ಮಾರ್ಚ್ 19 ರಂದು ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Yash’s Toxic Movie Teaser Released

Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.