ಅಂಗನವಾಡಿ ಸಹಾಯಕಿ ಅನುಮಾನಾಸ್ಪದ ಸಾವು ಪ್ರಕರಣ: ಓರ್ವನ ಬಂಧನ

ಹಂಚಿಕೊಳ್ಳಿ
WhatsApp Facebook X Telegram
Shiralakoppa Police Shiralakoppa Anganwadi Worker Prema Death
Shiralakoppa Police Shiralakoppa Anganwadi Worker Prema Death

ಶಿರಾಳಕೊಪ್ಪ :  ಶಿರಾಳಕೊಪ್ಪದ ಬಿಳಕಿ ಗ್ರಾಮದ ಅಂಗನವಾಡಿ ಸಹಾಯಕಿ ಪ್ರೇಮ ಮಡಿವಾಳರ (56) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೃತರ ದೂರದ ಸಂಬಂಧಿ ರಾಘವೇಂದ್ರ ಯಾನೆ ಕೋಡಿಹಳ್ಳಿ ರಾಘು (23) ಎಂದು ಗುರುತಿಸಲಾಗಿದೆ. ಶಿರಾಳಕೊಪ್ಪ ಸಿಪಿಐ ಸಂತೋಷ್ ಪಾಟೀಲ್ ನೇತೃತ್ವದ ತಂಡ ಆರೋಪಿಯನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ಶಿವಮೊಗ್ಗ : Sslc ಕಂಪ್ಲೀಟ್​ ಆಗಿದ್ಯಾ, ಉದ್ಯೋಗ ಹುಡುಕ್ತಿದ್ದೀರಾ, ಹಾಗಾದ್ರೆ ಸುದ್ದಿ ಓದಿ 

Shiralakoppa Police ಘಟನೆಯ ಹಿನ್ನಲೆ

ಫೆಬ್ರವರಿ 13ರಂದು ಕೆಲಸ ಮುಗಿಸಿ ಮನೆಗೆ ಬಂದಿದ್ದ ಪ್ರೇಮ ಅವರು ಊಟ ಮುಗಿಸಿ ಮಲಗಿದ್ದರು. ಆದರೆ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಮೃತರ ಮನೆಯ ಹಿಂಭಾಗದಿಂದ ಅವಸರದಲ್ಲಿ ಬೈಕ್ ಏರಿ ಪರಾರಿಯಾಗಿದ್ದನ್ನು ನೆರೆಹೊರೆಯವರು ಗಮನಿಸಿದ್ದರು. ಮರುದಿನ ಬೆಳಿಗ್ಗೆ ಅಂಗನವಾಡಿ ಶಿಕ್ಷಕರು ಕರೆ ಮಾಡಿದಾಗ ಪ್ರೇಮ ಅವರು ಫೋನ್ ಸ್ವೀಕರಿಸದ ಕಾರಣ ಸಂಶಯಗೊಂಡ ಸಾರ್ವಜನಿಕರು ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಪತ್ತೆಯಾದಾಗ ಪ್ರೇಮ ಅವರು ನಗ್ನಾವಸ್ಥೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಮಹಿಳೆಯ ಗುಪ್ತಾಂಗದ ಬಳಿ ರಕ್ತದ ಕಲೆಗಳು ಕಂಡುಬಂದಿದ್ದವು. ಈ ಸಾವಿನ ಬೆನ್ನತ್ತಿದ ತನಿಖಾ ತಂಡವು ಸಿಸಿಟಿವಿ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಮುಸುಕುಧಾರಿ ರಾಘುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. 

Shiralakoppa Police Arrest One in Bilaki Case

Shiralakoppa Police Shiralakoppa Anganwadi Worker Prema Death
Shiralakoppa Police
shivamogga car decor sun control house
shivamogga car decor sun control house
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor