ಹೊರಗಿನಿಂದ ಜೈಲೊಳಗೆ ಬಿತ್ತು ಗಮ್​ ಟೇಪ್​ ಸುತ್ತಿದ ಕಪ್ಪು ಬಣ್ಣದ ವಸ್ತು, ಅದರೊಳಗೆ ಇದ್ದಿದ್ದೇನು ಗೊತ್ತಾ.

This Article Written by / Prathapa thirthahalli / ಫೆಬ್ರವರಿ 2, 2026

Shivamogga Jail Security shivamogga central jail

Shivamogga Jail Security ಶಿವಮೊಗ್ಗ: ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ರವಾನಿಸುವ ಕಿಡಿಗೇಡಿಗಳ ಪ್ರಯತ್ನ ಮುಂದುವರಿದಿದ್ದು, ಜೈಲು ಅಧಿಕಾರಿಗಳ ಜಾಗರೂಕತೆಯಿಂದಾಗಿ ಈ ಸಂಚು ವಿಫಲಗೊಂಡಿದೆ. ಜನವರಿ 30ರಂದು ಸಂಜೆ ಜೈಲಿನ ಆವರಣಕ್ಕೆ ಎಸೆಯಲಾಗಿದ್ದ ಕಪ್ಪು ಗಮ್ ಟೇಪ್ ಸುತ್ತಿದ್ದ ಅನುಮಾನಾಸ್ಪದ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಮೊಬೈಲ್ ಹಾಗೂ ಮಾದಕ ವಸ್ತುಗಳು ಪತ್ತೆಯಾಗಿವೆ.

ಶಿವಮೊಗ್ಗ: ಸೂಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆಗೆ ಜೆಡಿಎಸ್ ಒತ್ತಾಯ, 10 ಕೋಟಿ ಭ್ರಷ್ಟಾಚಾರದ ಆರೋಪ

ಶಿವಮೊಗ್ಗ ಜೈಲಿನಲ್ಲಿ ಈ ಹಿಂದೆಯೂ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಒಳಗೆ ತಲುಪಿಸಲು ಹಲವು ಕಸರತ್ತುಗಳು ನಡೆದಿದ್ದವು. ಆದರೆ ಜೈಲು ನಿರ್ವಹಕರು ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಇವುಗಳನ್ನು ತಡೆಯಲಾಗುತ್ತಿದೆ. ಪ್ರಸ್ತುತ ಘಟನೆಯಲ್ಲಿ, ಜನವರಿ 30ರಂದು ಸಂಜೆ 6:30ರ ಸುಮಾರಿಗೆ ಭದ್ರಾ ವಿಭಾಗದ ಒಳ ಆವರಣದಲ್ಲಿ ಕಾರಾಗೃಹದ ಹೊರ ಗೋಡೆಯಿಂದ ಯಾರೋ ಅನಾಮಧೇಯ ವ್ಯಕ್ತಿಗಳು ಕಪ್ಪು ಬಣ್ಣದ ಗಮ್ ಟೇಪ್‌ನಿಂದ ಸುತ್ತಿದ ಪೊಟ್ಟಣವೊಂದನ್ನು ಎಸೆದಿದ್ದರು.

ಇದು ಸಿಬ್ಬಂದಿ ಪ್ರಕಾಶ್ ಹೊಸಕೋಟೆ ಅವರ ಕಣ್ಣಿಗೆ ಬಿದ್ದಿದ್ದು, ತಕ್ಷಣ ಅವರು ಇದನ್ನು ಕಾರ್ಯನಿರ್ವಾಹಕ ಜೈಲರ್ ಎಸ್.ಎಸ್. ಕಟ್ಟಿಮನಿ ಅವರ ಗಮನಕ್ಕೆ ತಂದು ಮುಖ್ಯ ಅಧೀಕ್ಷಕರಿಗೆ ಹಸ್ತಾಂತರಿಸಿದರು. ನಂತರ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ಕೆ.ಎಸ್.ಐ.ಎಸ್.ಎಫ್ ಸಬ್ ಇನ್ಸ್ಪೆಕ್ಟರ್ ವೀರೇಂದ್ರ ಪಿ., ಎ.ಎಸ್.ಐ ಮೋಹನ್ ಕುಮಾರ್, ಜೈಲರ್ ಎಸ್.ಎಸ್. ಕಟ್ಟಿಮನಿ ಹಾಗೂ ಸಹಾಯಕ ಜೈಲರ್ ಸಿದ್ದಪ್ಪ ಟಿ. ಕುರಿ ಅವರ ಸಮ್ಮುಖದಲ್ಲಿ ಈ ಪೊಟ್ಟಣವನ್ನು ತೆರೆಯಲಾಯಿತು.

ಪೊಟ್ಟಣವನ್ನು ಬಿಚ್ಚಿದಾಗ ಅದರಲ್ಲಿ ಒಂದು ನೀಲಿ ಬಣ್ಣದ ಪೊಕೊ (POCO) ಆಂಡ್ರಾಯ್ಡ್ ಮೊಬೈಲ್ ಫೋನ್, 93 ಬ್ರಾಂಡ್‌ನ 3 ಕಟ್ಟು ಬೀಡಿಗಳು ಹಾಗೂ ಬಿಡಿ 20 ಬೀಡಿಗಳು, 2 ಕ್ಲಾಸಿಕ್ ಕನೆಕ್ಟ್ ಸಿಗರೇಟ್ ಪ್ಯಾಕ್‌ಗಳು, 1 ಕಿಂಗ್ ಲೈಟ್ಸ್ ಸಿಗರೇಟ್ ಪ್ಯಾಕ್ ಹಾಗೂ ಒಂದು ಕಪ್ಪು ಬಣ್ಣದ ಚಾರ್ಜಿಂಗ್ ಕೇಬಲ್ ಪತ್ತೆಯಾಗಿವೆ.

ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಅಕ್ರಮವಾಗಿ ಎಸೆದ ಅನಾಮಧೇಯ ವ್ಯಕ್ತಿಗಳು ಹಾಗೂ ಇವುಗಳನ್ನು ಪಡೆಯಲು ಯತ್ನಿಸಿದ ಕೈದಿಗಳ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ-2022 ರ ಕಲಂ 42 ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

Shivamogga Jail Security Mobile and Contraband Seized

Shivamogga Jail Security shivamogga central jail
Shivamogga Jail Security shivamogga central jail raid by shivamogga police
shivamogga car decor sun control house
shivamogga car decor sun control house

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Malenadu Today News,shivamogga central jail,Shivamogga crime

ಮುಂದಿನ ಸುದ್ದಿ ಒದಿ