ಶಿವಮೊಗ್ಗ: ಮೂವರು ಅಪರಾಧಿಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ :ಆರೋಪಿಗಳು ಅಂತದ್ದೇನು ಮಾಡಿದ್ರು ಗೊತ್ತಾ..? 

This Article Written by / Prathapa thirthahalli / ಫೆಬ್ರವರಿ 2, 2026

Thirthahalli Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಶಿವಮೊಗ್ಗ : ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯಲ್ಲಿ 2022ರಲ್ಲಿ ನಡೆದಿದ್ದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದ್ದು, ನ್ಯಾಯಾಲಯವು ಅವರಿಗೆ ಕಠಿಣ ಕಾರಾವಾಸ ವಿಧಿಸಿ ತೀರ್ಪು ನೀಡಿದೆ. 

ಮನೆಯೆದುರು ಮಹಿಳೆಗೆ ಉಪಟಳ; ಥಟ್ ಅಂತಾ ಪ್ರತ್ಯಕ್ಷವಾದ ಅಕ್ಕ ಪಡೆ !ಶಿವಮೊಗ್ಗದಲ್ಲಿ ನಡೆದ ಘಟನೆ

ಘಟನೆಯ ಹಿನ್ನೆಲೆ

2022ರ ಮಾರ್ಚ್ 20ರಂದು ರಾತ್ರಿ, ಮಂಜುನಾಥ ಬಡಾವಣೆಯ ಮಹಾನಗರ ಪಾಲಿಕೆಯ ಖಾಲಿ ಜಾಗದಲ್ಲಿ ಬಾಬು ಕಿರಣ್ ಎಂಬುವವರು ತಾವು ಕೆಲಸ ಮಾಡಿದ ಹಣವನ್ನು ಪಡೆದು ಮನೆಗೆ ಮರಳುತ್ತಿದ್ದರು. ಈ ವೇಳೆ ಅಡ್ಡಗಟ್ಟಿದ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವ ಉದ್ದೇಶದಿಂದ ಬೆನ್ನಿಗೆ ಚೂರಿಯಿಂದ ಚುಚ್ಚಿ, ಮೈಕೈಗೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದರು. ಈ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಅಂದಿನ ತನಿಖಾಧಿಕಾರಿಯಾಗಿದ್ದ ನಿವೃತ್ತ ಪಿಎಸ್ಐ ತಿಮ್ಮಪ್ಪ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು. 

ವಾದ-ಪ್ರತಿವಾದಗಳನ್ನು ಆಲಿಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು, ಆರೋಪಿಗಳಾದ ಸಂತೋಷ್ @ ಸಂತು (27), ಶರತ್ (24) ಮತ್ತು ಪ್ರಶಾಂತ್ ಎಂ (24) ಇವರುಗಳು ಮಾಡಿರುವ ಅಪರಾಧ ದೃಢಪಟ್ಟಿದೆ ಎಂದು ಘೋಷಿಸಿದರು. 

ಅಪರಾಧಿಗಳಿಗೆ 5 ವರ್ಷಗಳ ಕಠಿಣ ಕಾರಾವಾಸ ಮತ್ತು ತಲಾ 12,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

Shivamogga Court Sentences 3 Youths to 5 Years Prison

shivamogga car decor sun control house
shivamogga car decor sun control house
Shivamogga Court KFD Fatality Shivamogga Round up
Shivamogga Court

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Doddapete police,Shivamogga court verdict

ಮುಂದಿನ ಸುದ್ದಿ ಒದಿ