ಶಿವಮೊಗ್ಗ: ಸೂಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆಗೆ ಜೆಡಿಎಸ್ ಒತ್ತಾಯ, 10 ಕೋಟಿ ಭ್ರಷ್ಟಾಚಾರದ ಆರೋಪ

ಹಂಚಿಕೊಳ್ಳಿ
WhatsApp Facebook X Telegram
SUDA Scam JDS Demands Probe into ₹10 Cr Corruption
SUDA Scam JDS Demands Probe into ₹10 Cr Corruption

ಶಿವಮೊಗ್ಗ : ಸೂಡಾದ 13 ಕಾಮಗಾರಿಗಳಲ್ಲಿ 10 ಕೋಟಿಗು ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಸೂಡದಲ್ಲಿರುವ ಎಲ್ಲಾ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆಬಿ ಪ್ರಸನ್ನ ಕುಮಾರ್ ಒತ್ತಾಯಿಸಿದ್ದಾರೆ.

ಶಿವಮೊಗ್ಗ | ಬಂಗಾರವಾಯ್ತು ಬೆಳ್ಳಿ : ಕೆಜಿ ಬೆಳ್ಳಿಗೆ 3.64 ಲಕ್ಷ, 10 ಗ್ರಾಂ ಚಿನ್ನಕ್ಕೆ 1.67 ಲಕ್ಷ

ಇಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರಾದ ಗುರು ಸಾಯಿ ಹಾಗೂ ಹೆಚ್.ಸಿ. ಬಸವರಾಜಪ್ಪ ಅವರು ಈ ಅಕ್ರಮದ ಕುರಿತು ಈಗಾಗಲೇ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈ 13 ಕಾಮಗಾರಿಗಳಿಗೆ ಒಟ್ಟು 40 ಕೋಟಿ ರೂಪಾಯಿ ವೆಚ್ಚವಾಗಿದ್ದು, ಅದರಲ್ಲಿ ಕೇವಲ 30 ಕೋಟಿ ರೂಪಾಯಿ ಮಾತ್ರ ಬಿಡುಗಡೆಯಾಗಿದೆ. ಇನ್ನುಳಿದ 10 ಕೋಟಿ ರೂಪಾಯಿ ಮೊತ್ತದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬುದು ದೂರುದಾರರ ಪ್ರಮುಖ ಆರೋಪವಾಗಿದೆ. ವಿಶೇಷವೆಂದರೆ, ಲೋಕಾಯುಕ್ತಕ್ಕೆ ದೂರು ನೀಡಿದ ನಂತರ ಗುತ್ತಿಗೆದಾರರಿಗೆ ಬೆದರಿಕೆ ಕರೆಗಳು ಬಂದಿವೆ ಹಾಗೂ ಲಂಚದ ಆಮಿಷವನ್ನೂ ಒಡ್ಡಲಾಗಿತ್ತು. ಆದರೆ ಇವ್ಯಾವುದಕ್ಕೂ ಬಗ್ಗದ ಗುತ್ತಿಗೆದಾರರು ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಾರೆ ಎಂದು ಪ್ರಸನ್ನ ಕುಮಾರ್ ವಿವರಿಸಿದರು.

ಅಕ್ರಮಕ್ಕೆ ಸಾಕ್ಷಿಯಾಗಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ಕಾಮಗಾರಿಯನ್ನು ಉದಾಹರಿಸಿದ ಅವರು, ಅಲ್ಲಿ ನಿಯಮದ ಪ್ರಕಾರ 1441 ಮೀಟರ್ ಕಬ್ ಸ್ಟೋನ್ ಅಳವಡಿಸಬೇಕಿತ್ತು. ಆದರೆ ವಾಸ್ತವದಲ್ಲಿ ಕೇವಲ 518 ಮೀಟರ್ ಕಬ್ ಸ್ಟೋನ್ ಮಾತ್ರ ಅಳವಡಿಸಿ, ಬಾಕಿ ಮೊತ್ತವನ್ನು ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

2023ರಲ್ಲಿ ಹೆಚ್.ಎಸ್. ಸುಂದರೇಶ್ ಅವರು ಸೂಡಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರಾಧಿಕಾರದ ಹಣವನ್ನು ಲೂಟಿ ಮಾಡಿದವರಿಂದ ಅದನ್ನು ವಸೂಲಿ ಮಾಡಿ ಮತ್ತೆ ಪ್ರಾಧಿಕಾರಕ್ಕೆ ಹಿಂದಿರುಗಿಸ ಬೇಕು. ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

SUDA Scam JDS Demands Probe into ₹10 Cr Corruption

SUDA Scam JDS Demands Probe into ₹10 Cr Corruption
SUDA Scam JDS Demands Probe into ₹10 Cr Corruption
shivamogga car decor sun control house
shivamogga car decor sun control house
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor