ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗಳಿಂದಲೇ ಆಪರೇಷನ್​ ಮೊಬೈಲ್​ !  ಸಿಕ್ತು 10 ಸಾವಿರ ಬಹುಮಾನ

ಹಂಚಿಕೊಳ್ಳಿ
WhatsApp Facebook X Telegram
Drugs Found in Snacks Shivamogga Central Jail Unbelievable Mobile Phone shivamogga central jail
Drugs Found in Snacks Shivamogga Jail Scandal Shivamogga Central Jail shivamogga central jail old image

ಶಿವಮೊಗ್ಗ : ರಾಜ್ಯದ ಪ್ರಮುಖ ಜೈಲುಗಳಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಡಿಜಿಪಿ ಅಲೋಕ್​ ಕುಮಾರ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೆ ಪರಪ್ಪನ ಅಗ್ರಹಾರ ಜೈಲಿಗೆ ಅಚ್ಚರಿಯ ವಿಸಿಟ್ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಷ್ಟೆ ಅಲ್ಲದೆ, ಪ್ರಮುಖ ಸೂಚನೆಗಳನ್ನ ನೀಡಿದ್ದರು. ಈ ನಡುವೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ, ಕಾರಾಗೃಹ ಸಿಬ್ಬಂದಿಗಳೇ ದಿಢೀರ್ ಕಾರ್ಯಾಚರಣೆ ನಡೆಸಿ, ಜೈಲಿನೊಳಗೆ ನಿಷೇಧಿತ ವಸ್ತುಗಳನ್ನು ಪತ್ತೆ ಮಾಡಿದ್ಧಾರೆ.ಗಾಂಜಾ ಸೇರಿದಂತೆ ವಿವಿಧ ನಿಷೇಧಿತ ವಸ್ತುಗಳು ಜೈಲಿನೊಳಗೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾರಾಗೃಹ ಸಿಬ್ಬಂದಿ ಕಳೆದ ಕೆಲವು ತಿಂಗಳಿನಲ್ಲಿ ಈ ಸಂಬಂಧ ಮುನ್ನೆಚ್ಚರಿಕಾ ಕ್ರಮಗಳಲ್ಲಿಯೇ ಹಲವು ಕೇಸ್​ಗಳು ದಾಖಲಾಗುವಂತೆ ಕ್ರಮ ಕೈಗೊಂಡಿದ್ದರು.

ಶಿವಮೊಗ್ಗ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ಕಳ್ಳರ ಕೈಚಳಕ; ಮಹಿಳಾ ಎಎಸ್‌ಐ  ಚಿನ್ನದ ಸರ ಕಳವು

Shivamogga Central Jail ಅಲ್ಲದೆ ತಮ್ಮದೇ ಸಿಬ್ಬಂದಿಯ ಕಳ್ಳಾಟವನ್ನು ಬಯಲಿಗೆಳೆದಿದ್ದ ಕಾರಾಗೃಹ ಇಲಾಖೆ ಅಧಿಕಾರಿಗಳು ಬಾಳೆಗೊನೆಯಲ್ಲಿ ಗಾಂಜಾ ಸಾಗಾಟಕ್ಕೂ ಬ್ರೇಕ್​ ಹಾಕಿದ್ದರು. ಈ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಕಾರಾಗೃಹ ಇಲಾಖೆ ಸಿಬ್ಬಂಧಿ ಮುಖ್ಯ ಅಧೀಕ್ಷಕ ಡಾ.ಪಿ ರಂಗನಾಥ್​ರವರ ನೇತೃತ್ವದಲ್ಲಿ ತಪಾಸಣೆಯನ್ನ ನಡೆಸಿದ್ದಾರೆ. 

ಸಾಮಾನ್ಯವಾಗಿ ಜೈಲುಗಳ ಮೇಲೆ ಆಯಾ ಜಿಲ್ಲೆಯ ಪೊಲೀಸ್ ಸಿಬ್ಬಂದಿಗಳು ಸರ್ಚ್ ಆಪರೇಷನ್​ ನಡೆಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹ ಸಿಬ್ಬಂದಿಯೇ ದಿಢೀರ್​ ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಶಿವಮೊಗ್ಗದ ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರಾಗೃಹದ ಕಾವೇರಿ ವಿಭಾಗದಲ್ಲಿ ಅನಿರೀಕ್ಷಿತ ತಪಾಸಣೆಯನ್ನು ಕೈಗೊಂಡಿದ್ದರು. ಈ ವೇಳೆ ಪೊಲೀಸರಿಗೆ  03 ಮೊಬೈಲ್ ಗಳು, 04 ಸಿಮ್ ಕಾರ್ಡ್​ಗಳು, 03 ಡೆಟಾ ಕೇಬಲ್ ಗಳು, 02 ಇಯರ್ ಫೋನ್, 01 ಚಾರ್ಜರ್ ಸಿಕ್ಕಿದೆ. 

ಈ ಕುರಿತಾಗಿ, ಡಾ.ಪಿ ರಂಗನಾಥ್​ ನೀಡಿರುವ ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಇನ್ನೂ ಜೈಲಿನೊಳಗಿನ ಅಕ್ರಮಗಳನ್ನು ಬಯಲಿಗೆಳೆದ ಜೈಲು ಅಧಿಕಾರಿಗಳ ಕಾರ್ಯವನ್ನು ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಅವರು ಶ್ಲಾಘಿಸಿದ್ದಾರೆ  ಕರ್ತವ್ಯ ನಿಷ್ಠೆ ತೋರಿದ ತಂಡಕ್ಕೆ ಪ್ರೋತ್ಸಾಹದಾಯಕವಾಗಿ 10,000 ರೂಪಾಯಿಗಳ ನಗದು ಬಹುಮಾನವನ್ನು ಸಹ ಅವರು ಘೋಷಿಸಿದ್ದಾರೆ.

Shivamogga Central Jail internal raid 

Shivamogga Central Jail Unbelievable Mobile Phone shivamogga central jail
Shivamogga Central Jail shivamogga central jail old image
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor