ಬಿಜೆಪಿ ಚುನಾವಣಾ ಪ್ರಚಾರಕ್ಕೆ ಒಳ ಮೀಸಲಾತಿ ಪರಿಷ್ಕರಣೆಯ ಬಿಸಿ/ ಆರಗ ಜ್ಞಾನೇಂದ್ರರ ವಿರುದ್ಧ ತಾಂಡಾ ಬಚಾವೋ ಕೂಗು

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 24, 2023 GOOGLE NEWS


ಶಿವಮೊಗ್ಗ/  ಎಸ್​ ಸಿ ಒಳ ಮೀಸಲಾತಿ ಪರಿಷ್ಕರಣೆ (sc internal reservation in karnataka) ಆಕ್ರೋಶ ಬಿಜೆಪಿಯ ಅಭ್ಯರ್ಥಿಗಳಿಗೆ ತಟ್ಟುತ್ತಲೇ ಇದೆ.

ಇತ್ತೀಚೆಗೆ ಬಿ.ವೈ ವಿಜಯೇಂದ್ರರವರಿಗೆ ಶಿಕಾರಿಪುರ ದಲ್ಲಿನ ತಾಂಡಾವೊಂದರಲ್ಲಿ ದಿಕ್ಕಾರದ ಘೋಷಣೆ ಕೂಗು ಕೇಳಿಬಂದಿತ್ತು. 

ಅಲ್ಲದೆ ಪ್ರಚಾರಕ್ಕೆ ಅಡ್ಡ ನಿಂತು ತಮ್ಮ ತಾಂಡಾದಲ್ಲಿ ಪ್ರತಿಭಟನೆ ನಡೆಸಿದ್ದರು ಬಂಜಾರ ಸಮುದಾಯದವರು 

ಆರಗ ಜ್ಞಾನೇಂದ್ರರಿಗೂ ತಟ್ಟಿದ ಬಿಸಿ

ಇದೀಗ ತೀರ್ಥಹಳ್ಳಿ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರರವರಿಗೂ ಬಂಜಾರ ಸಮುದಾಯದ ಪ್ರತಿಭಟನೆ ಎದುರಾಗಿದೆ.

ಮಂಡೆನಕೊಪ್ಪ ಗ್ರಾಮದಲ್ಲಿ ಬಿ ಜೆ ಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ರವರು ಪ್ರಚಾರಕ್ಕೆ ಬರುತ್ತಲೇ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾದ ವಿಡಿಯೋವೊಂದು ಹೊರಬಿದ್ದಿದೆ. 

ವಿಡಿಯೋ ದೃಶ್ಯದಲ್ಲಿ ಬಂಜಾರ ಸಮುದಾಯದವರು ತಾಂಡಾ ಬಚಾವೋ, ಬಿ ಜೆ ಪಿ ಹಠಾವೋ ಘೋಷಣೆ ಕೂಗುತ್ತಾ, ಬಿಜೆಪಿ ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ಧಾರೆ.

Malenadutoday.com Social media

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor