ರಾತ್ರಿ ದೊಡ್ಡಪೇಟೆ ಸ್ಟೇಷನ್​ಗೆ ಇಲಿಯಾಸ್ ನಗರ ನಿವಾಸಿಗಳ ದೌಡು! ಯುವತಿ ವಿಚಾರಣೆ ! ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram

Shivamogga Mar 20, 2024  ಆನ್‌ಲೈನ್‌ ಗೇಮ್‌ ಆ್ಯಪ್​ನಲ್ಲಿ ಹಣ ಹಾಕಿ ಮೋಸವಾಗಿದೆ ಎಂದು ಆರೋಪಿಸಿ ನಿನ್ನೆ ದಿನ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಗೆ ಇಲಿಯಾಸ್‌ ನಗರ ನಿವಾಸಿಗಳು ದೌಡಾಯಿಸಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಯುವತಿಯೊಬ್ಬರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆನ್‌ಲೈನ್‌ ವಂಚನೆ ಸಂಬಂಧ ಪೊಲೀಸರಿಗೆ ದೂರು ನೀಡದ ನಿವಾಸಿಗಳು ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಆನ್‌ಲೈನ್‌ ಗೇಮ್ ಆಪ್‌ನಲ್ಲಿ ಹಣ ತೊಡಗಿಸಿದರೆ ಡಬಲ್ ಆಗುತ್ತದೆ ಎಂದು ಜನರನ್ನು ನಂಬಿಸಲಾಗಿದೆ ಎಂಬುದು ಜನರ ಆರೋಪ. ಈ ಸಂಬಂಧ ಕೆಲವರು ಹಣ ಹಾಕಿ ಮೋಸಕ್ಕೆ ಒಳಗಾಗಿದ್ದು, ಆ ಸಂಬಂಧ ನಿವಾಸಿಗಳು ಸ್ಟೇಷನ್‌ಗೆ ಭೇಟಿಕೊಟ್ಟು ತಮ್ಮ ವಿಚಾರವನ್ನು ತಿಳಿಸಿದ್ದಾರೆ.. 

 

ಮೊದಮೊದಲು ಹಣ ಹೂಡಿದವರಿಗೆ ಹೆಚ್ಚಿನ ಹಣ ನೀಡಲಾಗಿದ್ದು, ಇದನ್ನು ನಂಬಿದ ಹಲವರು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಹೂಡಿಕೆ ಮಾಡಿದ ಹಣ ಡಬಲ್ ಆಗುವುದರ ಬದಲು, ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ  ತಾವು ಮೋಸದ ಜಾಲಕ್ಕೆ ಬಲಿ ಆಗಿರುವುದು ಗೊತ್ತಾಗಿದೆ ಪೊಲೀಶರ ಮೊರೆಹೋಗಿದ್ದಾರೆ. ಸದ್ಯ ಪ್ರಕರಣ ಸಿಇಎನ್‌ ಠಾಣೆಗೆ ವರ್ಗಾವಣೆ ಗೊಂಡಿದೆ.  

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor