SHIVAMOGGA | Jan 14, 2024 | ಶಿವಮೊಗ್ಗ ಪೊಲೀಸ್ ಇಲಾಖೆ (Shivamogga police station) ಸಿಟಿಯಲ್ಲಿ Area Domination ಗಸ್ತನ್ನು ಮುಂದುವರಿಸಿದ್ದಾರೆ.
Area Domination ವಿಶೇಷ ಗಸ್ತು
ದಿನಾಂಕ: 13-01-2024 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ವಾದಿ ಎ ಹುದಾ, ಸೂಳೆ ಬೈಲು, ನ್ಯೂ ಮಂಡ್ಲಿ, ಸಾವಾಯಿ ಪಾಳ್ಯ, ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಎ ಎ ಕಾಲೋನಿ, ಬೊಮ್ಮನಕಟ್ಟೆ ಯಲ್ಲಿ ಏರಿಯಾ ಡಾಮಿನೇಷನ್ ಗಸ್ತು ನಡೆಸಲಾಗಿದೆ.
ಭದ್ರಾವತಿ ಉಪವಿಭಾಗ
ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ, ಸಂತೆ ಮೈದಾನ, ಅನ್ವರ್ ಕಾಲೋನಿ, ತಮ್ಮಣ್ಣ ಕಾಲೋನಿ, ಬೊಮ್ಮನಕಟ್ಟೆ, ದೊಣಬಘಟ್ಟ ಮತ್ತು ಕೊಪ್ಪದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು Area Domination ವಿಶೇಷ ಗಸ್ತು ನಡೆಸಿದ್ದಾರೆ.
Public Nuisance
ಈ ವೇಳೆ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಕೇಸ್ ದಾಖಲಿಸಲಾಗಿದೆ.
IMV ಕಾಯ್ದೆ , COTPA ಕಾಯ್ದೆ
ಒಟ್ಟು 42 ಲಘು ಪ್ರಕರಣಗಳನ್ನು, IMV ಕಾಯ್ದೆ ಅಡಿಯಲ್ಲಿ 01 ಪ್ರಕರಣ ಮತ್ತು COTPA ಕಾಯ್ದೆ ಅಡಿಯಲ್ಲಿ 04 ಪ್ರಕರಣಗಳನ್ನು ದಾಖಲಿಸಿರುತ್ತಾರೆ.