ಚೆಕ್​ ಬೌನ್ಸ್ ಪ್ರಕರಣ | ಕೋರ್ಟ್ ಆದೇಶದ ಬಗ್ಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು? ಇಲ್ಲಿದೆ ವಿವರ

SHIVAMOGGA  |  Dec 30, 2023  |  ಚೆಕ್ಸ್‌ ಬೌನ್ಸ್‌ ಪ್ರಕರಣದಲ್ಲಿ 6.96 ಕೋಟಿ ರು. ದಂಡ ಪಾವತಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು,  ನನ್ನ ಮೇಲೆ ಬಂದಿರುವುದು ಚೆಕ್ ಬೌನ್ಸ್ ಪ್ರಕರಣವಲ್ಲ, ನಾವೇ ಕೋರ್ಟ್‌ನಲ್ಲಿ ಸೆಟ್ಮೆಂಟ್ ಮಾಡಿಕೊಂಡಿದ್ದೇವೆ ಎಂದಿದ್ದಾರೆ. 

READ : BIG NEWS SHIVAMOGGA | ಶಿವಮೊಗ್ಗ-ತೀರ್ಥಹಳ್ಳಿ ಹೆದ್ದಾರಿಗೆ ಅಡ್ಡಬಂದ ಕಾಡಾನೆ! ಹೈವೇ ನಲ್ಲಿ ಗಂಟೆ ಕಾಲ ಟ್ರಾಫಿಕ್ ಜಾಮ್

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ

ಇದರಲ್ಲಿ ನನ್ನನ್ನು ಎಳೆದು ತರಬೇಡಿ ಎಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ   (Primary and Secondary Education Minister Madhu Bangarappa  ) ನಾವೇ ಒಪ್ಪಿಕೊಂಡು ಸೆಟ್ಸ್‌ಮೆಂಟ್ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಇದು 12 ವರ್ಷದ ವ್ಯಾಜ್ಯ. ಇದನ್ನು ನಾವೇ ಬರವಣಿಗೆಯಲ್ಲಿ ಬರೆದು ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಬರೆದುಕೊಟ್ಟಿದ್ದೇನೆ. ಅಲ್ಲದೇ ಇದು ನನ್ನ ವೈಯಕ್ತಿಕವಲ್ಲ, ಕಂಪನಿ ಮೇಲಿದೆ. ಹೀಗಾಗಿ ಮಾಧ್ಯಮ ಜವಾಬ್ದಾರಿಯುತವಾಗಿ ಮಾಹಿತಿ ನೀಡಬೇಕು ಎಂದಿದ್ದಾರೆ. 

Leave a Comment