ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್​!

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | SHIMOGA AIRPORT |  Dec 8, 2023 |   ಶಿವಮೊಗ್ಗ ವಿಮಾನ ನಿಲ್ದಾಣ ಮತ್ತೆ ಸುದ್ದಿಯಾಗಿದೆ. ಇದಕ್ಕೆ ಕಾರಣ ದಟ್ಟವಾದ ಮಂಜು. ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಇಳಿಸುವುದು ಕಷ್ಟವಾಗುತ್ತಿದೆ. ದಟ್ಟವಾದ ಮಂಜು ಆವರಿಸುವ ಕಾರಣ ವಿಮಾನಗಳ ಲ್ಯಾಂಡಿಂಗ್ ತಡವಾಗುತ್ತಿದ್ದು, ನಿಗದಿತ ಸಂಚಾರಕ್ಕೆ ತಡವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ  ನಿನ್ನೆ ಗೋವಾಕ್ಕೆ ಹೋಗಬೇಕಿದ್ದ ವಿಮಾನ ಸಂಚಾರ ರದ್ದಾಗಿದೆ. 

ನಿನ್ನೆ  ಮಧ್ಯಾಹ್ನದವರೆಗೂ ಮಂಜು ಕವಿದ ವಾತಾವರಣ ಇದ್ದ ಕಾರಣ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 11.05ಕ್ಕೆ ಆಗಮಿಸಬೇಕಿದ್ದ ವಿಮಾನ ಮಧ್ಯಾಹ್ನ 1.48ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. 

READ: ಬಚ್ಚಲು ಒಲೆಗೆ ಹಾಕಿದ್ದ ಬೆಂಕಿಯಿಂದ ಆಯ್ತು ಅನಾಹುತ!

ಶಿವಮೊಗ್ಗ ವಿಮಾನ ನಿಲ್ದಾಣ

ಇನ್ನೂ  ಹೈದರಾಬಾದ್‌ನಿಂದ ಶಿವಮೊಗ್ಗಕ್ಕೆ 10.35ಕ್ಕೆ ಬರಬೇಕಿದ್ದ ಸ್ಟಾರ್‌ ಏರ್‌ ವಿಮಾನ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದಿದೆ. 

ಇದೇ ವಿಮಾನ ತಿರುಪತಿಗೆ ಹಾಗೂ ಗೋವಾಕ್ಕೆ ತೆರಳಬೇಕಿತ್ತು. ಆದರೆ ಶಿವಮೊಗ್ಗಕ್ಕೆ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಗೋವಾ ಟ್ರಿಪ್ ಕ್ಯಾನ್ಸಲ್ ಆಗಿದೆ. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಈ ಲ್ಯಾಂಡಿಂಗ್ ಪ್ರಾಬ್ಲಮ್​ ಚಳಿಗಾಲ ಪೀಕ್​ನಲ್ಲಿರುವ ಸಂದರ್ಭದಲ್ಲಿ ಇನ್ನಷ್ಟು ಸಮಸ್ಯೆ ಒಡ್ಡುವ ಸಾಧ್ಯತೆ ಇದೆ. 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor