ಇವತ್ತು ಶಿವಮೊಗ್ಗದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ! ಕಾರಣ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS 

ಶಿವಮೊಗ್ಗದಲ್ಲಿ ಇಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ (Shimoga district BJP) ವತಿಯಿಂದ ಪ್ರತಿಭಟನೆ  ಕೈಗೊಳ್ಳಲಾಗುತ್ತಿದೆ. 

ರೈತವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಕೇಂದ್ರದಲ್ಲಿ ಬೆಳಿಗೆ 10-30ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್  ನಿನ್ನೆ ಈ ಬಗ್ಗೆ ಮಾಹಿತಿ ನೀಡಿದ್ಧಾರೆ  

ಈ ಪ್ರತಿಭಟನೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಹಾಗೂ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು, ಕಾರ್ಯಕರ್ತರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಪ್ರಧಾನಿ ಮೋದಿಯವರ ಜನ್ಮದಿನ ಸೆ.17 ರಂದು ಆಗಿದ್ದು, ಇದರ ಅಂಗವಾಗಿ ಸೆ.17ರಿಂದ ಅ.2ರ ವರೆಗೆ ಬಿಜೆಪಿ ಸೇವಾ ಪಾಕ್ಷಿಕ ಆಚರಣೆ ಹಮ್ಮಿಕೊಂಡಿದೆ. 

ಇದರ ಅಂಗವಾಗಿ ರಕ್ತದಾನ ಶಿಬಿರ, ಆಯುಷ್ಯಾನ್ ಕಾರ್ಡ್ ವಿತರಣೆ, ದೀನದಯಾಳ್ ಜನ್ಮ ದಿನಾಚರಣೆ, ಎಲ್ಲಾ ಶಕ್ತಿ ಮಹಾಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತದೆ ಎಂದು ತಿಳಿಸಿದ ಅವರು, ಅಕ್ಟೋಬರ್​ 2ರಂದು ಗಾಂಧಿ ಜಯಂತಿಯ ದಿನದಂದು ಸಮಾರೋಪ ಸಮಾರಂಭ, ಸ್ವಚ್ಛತಾ ಆಂದೋಲನದ ಮೂಲಕ ನಡೆಯಲಿದೆ ಎಂದರು.


ಇನ್ನಷ್ಟು ಸುದ್ದಿಗಳು 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor