ಆ ಕಡೆ ಅಗ್ನಿಸಾಕ್ಷಿ, ಈ ಕಡೆ ಡಿಗ್ರಿ ಪರೀಕ್ಷೆ! ಬಾವಿಪತ್ನಿಗೆ ನೆರವಾದ ಮಧುಮಗ! ಇನ್​ಸ್ಟ್ಯಾಗ್ರ್ಯಾಂನಿಂದ ಎಕ್ಸಾಂ ಹಾಲ್​ವರೆಗೂ ವಿಶೇಷ ಮದುವೆಯ ಪಯಣ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 10, 2023 SHIVAMOGGA NEWS

ಒಂದೆಡೆ ಪ್ರೀತಿಸಿದ ಯುವಕನನ್ನು ಮದುವೆಯಾಗುವ ಅಮೃತ ಘಳಿಗೆ  ಮತ್ತೊಂದೆಡೆ ಅದೇ ದಿನ ಪರೀಕ್ಷೆ ಬರೆಯಬೇಕಾದ  ಸಂದರ್ಭ ಎದುರಾದಾಗ ಆ ಯುವತಿ ಎರಡು ಪರೀಕ್ಷೆಗಳನ್ನು ಗೆದ್ದು ಬೀಗಿದ್ದಾಳೆ

Malenadu Today Shivamogga

ಮುಂಜಾನೆ ತಾಳಿಕಟ್ಟಿಸಿಕೊಂಡ ನವವಿವಾಹಿತ ಪರೀಕ್ಷಾ ಕೊಠಡಿಗೆ ಬಂದು ಡಿಗ್ರಿ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶಿವಮೊಗ್ಗ ಭರ್ಮಪ್ಪ ನಗರದ ಸತ್ಯವತಿ ಎಂಬ ಯುವತಿ ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಪರೀಕ್ಷಾ ಕೊಠಡಿಗೆ ಬಂದು ಪರೀಕ್ಷೆ ಬರೆದಿದ್ದಾಳೆ. 

Malenadu Today Shivamogga

ಪರೀಕ್ಷೆ ನಂತರ ಪ್ರಿಯಕರ ತನ್ನದೇ ಬೈಕ್ ನಲ್ಲಿ ಯುವತಿಯನ್ನು ಪುನಃ ಮಧುವೆಯ ಅಂಗಳಕ್ಕೆ ಕರೆದುದಕೊಂಡು ಬಂದಿದ್ದಾನೆ. ಬಳಿಕ ಮದುವೆಯ ಉಳಿದ ಶಾಸ್ತ್ರಗಳನ್ನು ಮುಗಿಸಿದ್ದಾರೆ. 

ಎರಡು ವರ್ಷದ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಪರಿಚಯವಾದ ಚೆನ್ನೈ ಮೂಲದ ಪ್ರಾನ್ಸಿಸ್ ಎಂಬ ಯುವಕನೊಂದಿಗೆ ಸತ್ಯವತಿಗೆ ಪ್ರೇಮಾಂಕುರವಾಗಿದೆ. ಎರಡು ವರ್ಷ ಇನ್ ಸ್ಟಾ ಗ್ರಾಂ ನಲ್ಲಿ ಚಾಟ್ ಮಾಡಿಕೊಂಡಿದ್ದ ಪ್ರೇಮಿಗಳು ನಂತರ ಮದುವೆಯಾಗುವ ನಿರ್ದಾರ ತಳೆದಿದ್ದಾರೆ. ಇಬ್ಬರು ತಮ್ಮ ಪೋಷಕರನ್ನು ಒಪ್ಪಿಸಿ ಇಂದು ಸರಳ ವಿವಾಹವಾಗಿದ್ದಾರೆ.

Malenadu Today Shivamogga

ಪ್ರಾನ್ಸಿಸ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು,,ಹಿಂದು ಧಾರ್ಮಿಕ ಪದ್ಧತಿಯಂತೆ ವಿವಾಹವಾಗಿದ್ದಾರೆ. ಇದೇ ವೇಳೆ ಇವತ್ತೇ ಪರೀಕ್ಷೆಯು ಎದುರಾಗಿದ್ದರಿಂದ ಶಿವಮೊಗ್ಗದ ಕಮಲಾ ನೆಹರು ಕಾಲೇಜಿನ ಅಂತಿಮ ವರ್ಷದ ಬಿಎ ವಿದ್ಯಾರ್ಥಿನಿ ಸತ್ಯವತಿ ಎಕನಾಮಿಕ್ಸ್ ಪರೀಕ್ಷೆಯನ್ನು ಬರೆದಿದ್ದಾಳೆ. 

Malenadu Today Shivamogga


ಇನ್ನಷ್ಟು ಸುದ್ದಿಗಳು 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor