KARNATAKA NEWS/ ONLINE / Malenadu today/ Sep 10, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆಯ ಅಪರಾಧ ಜಗತ್ತಿನಲ್ಲಿ ಚಿತ್ರವಿಚಿತ್ರ ಕೇಸ್ಗಳು ಆಗಾಗ ದಾಖಲಾಗುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಇದೀಗ ಚಿನ್ನದಂಗಡಿಯಲ್ಲಿಯೇ ನಕಲಿ ಚಿನ್ನ ಇಟ್ಟು ಅಸಲಿ ಚಿನ್ನ ಕದ್ದುಕೊಂಡ ಹೋಗಿದ್ದ ಐನಾತಿ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ
ಶಿವಮೊಗ್ಗದ ಗಾಂಧಿಬಜಾರ್ನಲ್ಲಿ ನಡೆದ ಘಟನೆಯಿದು, ಇಲ್ಲಿನ ಅಂಗಡಿಯೊಂದಕ್ಕೆ ಬಂದಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಜ್ಯುವೆಲರಿ ಅಂಗಡಿಯಲ್ಲಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಮೊದಲ ಸಲ ಬಂದಿದ್ದ ವೇಳೆ, ಸುಮಾರು 11,500 ರೂ. ಮೌಲ್ಯದ ಚಿನ್ನಾಭರಣ ಖರೀದಿಸಿದ್ದರು. ಹೀಗೆ ನಂಬಿಕೆ ಮೂಡುವಂತೆ ಮಾಡಿ ಎರಡನೇ ಸಲ ಬಂದ ಇಬ್ಬರು ಒಡವೆಗಳನ್ನು ಖರೀದಿಸುವ ನೆಪದಲ್ಲಿ ಹಲವು ಆಭರಣಗಳನ್ನು ಪರೀಕ್ಷಿಸಿದ್ದಾರೆ. ಅಂಗಡಿ ವ್ಯಾಪಾರಕ್ಕಿದ್ದ ಹುಡುಗನ ಗಮನ ಬೇರೆಡೆ ಸೆಳೆದು ನಕಲಿ ಬಂಗಾರವಿಟ್ಟು 85,900 ರೂ. ಮೌಲ್ಯದ 17 ಗ್ರಾಂ ಅಸಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ನಡೆದ ಕಳ್ಳತನದ ಬಗ್ಗೆ ಅಂಗಡಿಯವರಿಗೆ ತಡವಾಗಿ ಮಾಹಿತಿಗೊತ್ತಾಗಿ ಪೊಲೀಸರ ಮೊರೆಹೋಗಿದ್ದಾರೆ. ಕೇಸ್ ದಾಖಲಿಸಿಕೊಂಡ ಪೊಲೀಸರು, ಇದೀಗ ಕೊಪ್ಪಳ ಮೂಲದ ಮೆಹಬೂಬ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬಳು ಇನ್ನೂ ಸಹ ಪತ್ತೆಯಾಗಿಲ್ಲ.
ಇನ್ನಷ್ಟು ಸುದ್ದಿಗಳು
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!