ಆಲ್ಕೊಳದಿಂದ ಅಮೀರ್ ಅಹಮದ್ ಸರ್ಕಲ್​ ವರೆಗೂ ಬುಲೆಟ್​ನಲ್ಲಿ ಎಸ್​ಪಿ ಮಿಥುನ್ ಕುಮಾರ್ ಸಿಟಿ ರೌಂಡ್ಸ್​ ! ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 9, 2023 SHIVAMOGGA NEWS 

ಇವತ್ತು ನಗರದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ, ಮತ್ತು ಬುಲ್ಸ್ ಆಫ್ ಶಿವಮೊಗ್ಗ, ಬೈಕರ್ಸ್ ಆಫ್ ಶಿವಮೊಗ್ಗ, ರಾಯಲ್ ರೋಲಿಂಗ್ ಮಾಂಕ್ಸ್ ಶಿವಮೊಗ್ಗ, ರೋಡ್ ಥ್ರಿಲ್ಲರ್ಸ್ ಶಿವಮೊಗ್ಗ, ಮಲ್ನಾಡ್ ಟಸ್ಕರ್ಸ್ ಶಿವಮೊಗ್ಗ, ಕೆಟಿಎಂ ಶಿವಮೊಗ್ಗ ಮತ್ತು ಇತರೆ ಕ್ಲಬ್ ಗಳ ಸಹಯೋಗದೊಂದಿಗೆ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ಜಾಥಾವನ್ನು ಹಮ್ಮಿಕೊಳ್ಳಕಾಗಿತ್ತು. ಈ ಬೈಕ್ ಜಾಥಾದಲ್ಲಿ ಪಾಲ್ಗೊಂಡ ಎಸ್​ಪಿ ಮಿಥುನ್ ಕುಮಾರ್ ಜಿ.ಕೆ ಬುಲೆಟ್ ಬೈಕ್​ ಓಡಿಸಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು. 

Malenadu Today Shivamogga

ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಮೈದಾನದಿಂದ ಪ್ರಾರಂಭವಾದ ಬೈಕ್ ಜಾಥಾ ಐಬಿ ವೃತ್ತದ ಮೂಲಕ ಆಲ್ಕೊಳ ವೃತ್ತ, ವಿನೋಬನಗರ ಚೌಕಿ, ಉಷಾ ನರ್ಸಿಂಗ್ ಹೋಂ ವೃತ್ತ, ಮಹಾವೀರ ವೃತ್ತ, ಕರ್ನಾಟಕ ಸಂಘ, ಹೊಳೆ ಬಸ್ ಸ್ಟಾಪ್, ಎಂ.ಆರ್.ಎಸ್  ವೃತ್ತ, ನ್ಯೂ ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ಐಬಿ ವೃತ್ತ, ಕುವೆಂಪು ರಸ್ತೆ, ಜುಯಲ್ ರಾಕ್ ಹೋಟೆಲ್ ರಸ್ತೆ, ಗೋಪಿ ವೃತ್ತ, ಅಮೀರ್ ಅಹಮ್ಮದ್ ವೃತ್ತದಿಂದ ಅಶೋಕ ವೃತ್ತದ ಮೂಲಕ ಡಿಎಆರ್ ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು.

ಈ  ಬೈಕ್ ಜಾಥಾದಲ್ಲಿ   ಅನಿಲ್ ಕುಮಾರ್ ಭೂಮರಡ್ಡಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ,   ಬಾಲರಾಜ್, ಡಿ.ವೈ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಎ ಉಪ ವಿಭಾಗ,   ಪ್ರಭು ಡಿ.ಟಿ, ಡಿ.ವೈ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಡಿಸಿಆರ್.ಬಿ ಶಿವಮೊಗ್ಗ,   ಸುರೇಶ್ ಎಂ ಡಿ.ವೈ.ಎಸ್.ಪಿ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ-ಬಿ ಉಪ ವಿಭಾಗ,   ಪ್ರಶಾಂತ್, ಆರ್.ಪಿ.ಐ ಡಿಎಆರ್ ಶಿವಮೊಗ್ಗ,   ಸಂತೋಷ್ ಕುಮಾರ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಬೈಕ್ ಕ್ಲಬ್ ಗಳ ಬೈಕ್ ಸವಾರರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಭಾಗವಹಿಸಿದ್ದರು.


   

ಇನ್ನಷ್ಟು ಸುದ್ದಿಗಳು 


 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor