ಗುದ್ದಲಿ ಪೂಜೆಗೆಂದು ವಡ್ನಾಳ್​ಗೆ ಹೋಗಿ ಮನೆಗೆ ವಾಪಸ್ ಬಂದಾಗ ಮಾಲೀಕರಿಗೆ ಎದುರಾಗಿತ್ತು ಶಾಕ್!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS  

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಸ್ಟೇಷನ್ (Jayanagar Police Station) ವ್ಯಾಪ್ತಿಯಲ್ಲಿ ಬರುವ ಎಎ ಕಾಲೋನಿಯಲ್ಲಿ ಮನೆಯೊಂದರ ಭೀಗ ಮುರಿದು ಕಳ್ಳತನ ನಡೆಸಿರುವ ಬಗ್ಗೆ ವರದಿಯಾಗಿದೆ. 

ಏನಿದು ಘಟನೆ?

ಇಲ್ಲಿನ ನಿವಾಸಿಯೊಬ್ಬರು ಮನೆಯೊಂದರ ಗುದ್ದಲಿ ಪೂಜೆ ಸಲುವಾಗಿ ವಡ್ನಾಳ್​ಗೆ ಹೋಗಿದ್ದರು. ಕುಟುಂಬ ಸಮೇತ ಹೋಗಿದ್ದ  ಹಿನ್ನೆಲೆಯಲ್ಲಿ ಮನೆಗೆ ಭೀಗ ಹಾಕಿ ಹೋಗಿದ್ದರು. ಗುದ್ದಲಿ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬಂದು ನೋಡಿದಾಗ, ಮನೆಯ ಮುಂದಿನ ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದಿರುವುದು ಕಂಡು ಬಂದಿದೆ. ಅನುಮಾನಗೊಂಡು ಒಳಕ್ಕೆ ಹೋಗಿ ನೋಡಿದಾಗ,  ಮನೆಯ ಹಾಲ್ ನಲ್ಲಿದ್ದ 2 ಗಾಡ್ರೆಜ್ ಬೀರುವಿನ ಬಾಗಿಲು ಒಡೆದು 3.5 ಗ್ರಾಂ ಬಂಗಾರದ ಕಿವಿ ಓಲೆ, 5 ಗ್ರಾಂ ಬಂಗಾರದ 3 ಉಂಗುರ, ಬೆಳ್ಳಿಯ ಕಾಲ್​ಚೈನ್, ಕೈ ಬಳೆ ಮತ್ತು ಸೊಂಟದ ಪಟ್ಟಿ,  , 30000 ಕ್ಯಾಶ್​  ಕಳುವಾಗಿರುವುದು ಕಂಡು ಬಂದಿದೆ. 

ಈ ಘಟನೆ ಬೆನ್ನಲ್ಲೆ ಜಯನಗರ ಠಾಣೆ ಪೊಲೀಸರಿಗೆ ಮನೆಯವರು ದೂರು ನೀಡಿದ್ದು , ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor