KARNATAKA NEWS/ ONLINE / Malenadu today/ Aug 30, 2023 SHIVAMOGGA NEWS
ಸರ್ಕಾರದ ಸ್ವತಂತ್ರವಾದ ಶಿಸ್ತುಬದ್ಧ ಹಾಗೂ ಸಮವಸ್ತ್ರದಾರಿ ಸ್ವಯಂಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾದ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳನ್ನು ತುಂಬಲು ಅರ್ಜಿ ಆಹ್ವಾನಿಸಲಾಗಿದೆ.
ಪುರುಷ ಒಟ್ಟು 115 ಮತ್ತು ಮಹಿಳೆ 07 ಸ್ಥಾನಗಳಿಗೆ ಅರ್ಜಿಗಳನ್ನು : 25-08-2023 ರಿಂದ 10-09-2023 ರೊಳಗೆ ಸಲ್ಲಿಸಬಹುದು. ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಸನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಕೆಳಗೆ ತಿಳಿಸ ಲಾದ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ.
ಶಿವಮೊಗ್ಗದಲ್ಲಿ ಪುರುಷ 29, ಮಹಿಳೆ 05 ಸಂಪರ್ಕಿಸಬೇಕಾದ ಘಟಕಾಧಿಕಾರಿ ಜಿ.ಇ. ಶಿವಾನಂದಪ್ಪ ಮೊ.ಸಂ. 9880705966. ಹಾರನಹಳ್ಳಿ ಪುರುಷ 07 ಘಟಕಾಧಿಕಾರಿ ಸಿ.ಮಧು 9686631428. ಭದ್ರಾವತಿ ಪುರುಷ 14, ಮಹಿಳೆ 02 ಘಟಕಾಧಿಕಾರಿ ಜಗದೀಶ್ 9900283490.
ಹೊಳೆಹೊನ್ನೂರು ಪುರುಷ 07 ಘಟಕಾಧಿಕಾರಿ ಹೆಚ್.ಎಸ್.ಸುನೀಲ್ ಕುಮಾರ್ 8105840345. ತೀರ್ಥಹಳ್ಳಿ ಪುರುಷ 10, ಘಟಕಾಧಿಕಾರಿ ಹೆಚ್.ಪಿ.ರಾಘವೇಂದ್ರ 9535388472. ಸಾಗರ ಪುರುಷ 03 ಘಟಕಾಧಿಕಾರಿ ಎಂ.ರಾಘವೇ೦ದ್ರ 632614031. ಜೋಗ ಪುರುಷ 04 ಘಟಕಾಧಿಕಾರಿ ಡಿ.ಸಿದ್ದರಾಜು 9449699459, ಆನಂದಪುರ ಪುರುಷ 07 ಘಟಕಾಧಿಕಾರಿ ಎಂ.ರಾಘವೇಂದ್ರ 9632614031. ಶಿಕಾರಿಪುರ ಪುರುಷ 14 ಡಾ.ಸಂತೋಷ್ ಎಸ್.ಶೆಟ್ಟಿ 9845402789, ಶಿರಾಳಕೊಪ್ಪ ಪುರುಷ 05 ಘಟಕಾಧಿಕಾರಿ ಸೈಯದ್ ಇಸಾಕ್ 8861492078, ಹೊಸನಗರ ಪುರುಷ 10 ಘಟಕಾಧಿಕಾರಿ ಕೆ.ಅಶೋಕ್ 9241434669. ರಿಪ್ಪನ್ ಪೇಟೆ ಪುರುಷ 03 ಘಟಕಾಧಿಕಾರಿ ಟಿ.ಶಶಿಧರಾಚಾರ್ಯ 9741477689, ಸೊರಬ ಪುರುಷ 08 ಘಟಕಾಧಿಕಾರಿ ಬಿ.ರೇವಣಪ್ಪ 9945066084.
ಗೃಹರಕ್ಷಕರಾಗಲು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟು 45 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 10ನೇ ತರಗತಿ ಉತ್ತೀರ್ಣರಾಗಿ ರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ/ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ ದಾಖಲಾಗಿರದಿದ್ದಲ್ಲಿ ಅಂತಹವರು ಹಾಗೂ ಘಟಕ ಇರುವ ಸ್ಥಳದಿಂದ ಸುಮಾರು 8 ರಿಮದ 12 ಕಿ.ಮೀ ಅಂತರದಲ್ಲಿರುವವರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗೃಹರಕ್ಷಕದಳ ಜಿಲ್ಲಾ ಗೌರವ ಸಮಾದೇಷ್ಟರಾದ ಚಂದನ್ ಪಟೇಲ್ ಎಂ.ಪಿ. ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಪ್ರೀತಿ ಪೆಟ್ಟು ಹುಷಾರು! ಪ್ರೇಮಿಸಿದ ಯುವಕನನ್ನ ಕೂಡಿ ಹಾಕಿ ಹೊಡೆದ ಹುಡುಗಿ ಕಡೆಯವರು! ದಾಖಲಾಯ್ತು ಎಫ್ಐಆರ್!
ಮನೆ ಹಿತ್ತಲಲ್ಲಿದ್ದ ಬಾವಿಗೆ ಬಿದ್ದ ಮಹಿಳೆ! ಬಚಾವ್ ಆಗಿದ್ದೇ ಹೆಚ್ಚು! ನಡೆದಿದ್ದೇನು?