KARNATAKA NEWS/ ONLINE / Malenadu today/ Jul 29, 2023 SHIVAMOGGA NEWS
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ವಿದ್ಯುತ್ ಅವಘಡವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಇಲ್ಲಿನ ಸ್ಥಳೀಯ ನಿವಾಸಿ ಗಿರೀಶ್ ಎಂಬಾತ ಮೃತ ದುರ್ದೈವಿ.
ಸ್ಥಳೀಯ ನಿವಾಸಿ ಗಿರೀಶ್ ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಕಾಣೆಯಾಗಿದ್ದ. ಆತ ಮನೆಗೆ ಊಟಕ್ಕೆ ಬರದಿದ್ದನ್ನು ನೋಡಿ ಕುಟುಂಬಸ್ಥರು ಹುಡುಕಾಡಿದ್ದಾರೆ. ಕುರಿ ಕಾಯಲು ಹೋಗಿದ್ದ ಗಿರೀಶ್ ಮಲ್ಲಿಕಾರ್ಜುನ್ ನಗರದ ಬಳಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನೆ ಹೇಗಾಯ್ತು ಎಂಬುದನ್ನ ನೋಡಿದವರಿಲ್ಲ. ಛತ್ರಿ ತಗುಲಿದ್ದರಿಂದ ಕರೆಂಟ್ ತಗುಲಿರಬಹುದು ಎಂದು ಊಹಿಸುತ್ತಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಗಿರೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈತನಿಗೆ ಮದುವೆಯಾಗಿ ಮಕ್ಕಳಿದ್ದು, ಕುಟುಂಬಕ್ಕೆ ಈತನೇ ಆಧಾರವಾಗಿದ್ದ. ಇದೀಗ ಘಟನೆಯಲ್ಲಿ ಗಿರೀಶ್ ನನ್ನ ಕಳೆದುಕೊಂಡಿರುವ ಕುಟುಂಬ ಅನಾಥವಾಗಿದೆ.
BIG EXCLUSIVE / ಶರತ್ಗಾಗಿ ಜ್ಯೋತಿರಾಜ್ ಹುಡುಕಾಟ! ಡ್ರೋಣ್ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!