ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್​ನಿಂದ 13 ಮಂದಿ ಸ್ಥಳೀಯ ನಾಯಕರ ಉಚ್ಚಾಟನೆ ! ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jul 7, 2023 SHIVAMOGGA NEWS 

ಶಿವಮೊಗ್ಗ ಕಾಂಗ್ರೆಸ್ ಪಕ್ಷದಿಂದ 13 ಮಂದಿಯನ್ನು ಉಚ್ಚಾಟನೆ ಮಾಡಲಾಗಿದೆ. ಉಚ್ಚಾಟಣೆಗೊಂಡವರಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪರವರ ಪುತ್ರಿ ಡಾ.ರಾಜನಂದಿನಿಯವರು ಇದ್ದಾರೆ. 

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಆಡಳಿತ ಉಸ್ತುವಾರಿ ಸಿ.ಎಸ್.ಚಂದ್ರಭೂಪಾಲ್ ಉಚ್ಛಾಟನೆ ಆದೇಶ ಪ್ರಕಟಿಸಿದ್ದಾರೆ.  

ಪಕ್ಷಾಂತರ ಮಾಡಿದ್ದಷ್ಟೆ ಅಲ್ಲದೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಶಿಫಾರಸ್ಸಿನಂತೆ 13 ಮಂದಿಯನ್ನು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.

ಯಾರ್ಯಾರು ಉಚ್ಚಾಟನೆಗೊಂಡವರು?

ಡಾ. ರಾಜನಂದಿನಿ, ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್, ನಗರಸಭೆ ಮಾಜಿ ಸದಸ್ಯ ಜಿ.ಕೆ.ಭೈರಪ್ಪ, ರಮೇಶ್ ಗಾಳಿಪುರ, ಗ್ರಾಪಂ ಅಧ್ಯಕ್ಷ ವೆಂಕಟೇಶ ಮೆಳವರಿಗೆ, ಭರ್ಮಪ್ಪ ಅಂದಾಸುರ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಲ್ಯಾವಿಗೆರೆ, ಶಿವಪ್ಪ, ಮೋಹನ್, ಅಬ್ದುಲ್ ಹಮೀದ್, ರಮೇಶ್ ಹೊಸಂತೆ, ಎಂ.ಎಚ್.ವೀರೇಂದ್ರ ಮಡಸೂರು ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ


ಶಾಲೆ ವಾಹನದ ಟೈಯರ್​ಗೆ ಸಿಲುಕಿ ಚಾಲಕ ಸಾವು! ಭದ್ರಾವತಿಯಲ್ಲಿ ನಡೆದ ಘಟನೆ!

ಭದ್ರಾವತಿ  ತಾಲ್ಲೂಕಿನ ಕೂಡ್ಲಿಗೆರೆ ಬಳಿಯಲ್ಲಿ ಶಾಲಾ ವಾಹನಕ್ಕೆ ವ್ಯಕ್ತಿಯೊಬ್ಬರು ಸಿಲುಕಿ ಸಾವನ್ನಪ್ಪಿದ್ದಾರೆ. 37 ವರ್ಷ ವಿಶ್ವನಾಥ್ ಕೊಟ್ರಪ್ಪ ಮೃತ ದುರ್ದೈವಿ

ಘಟನೆ ನಡೆದಿದ್ದೇಗೆ?

ಹಾವೇರಿ ಜಿಲ್ಲೆಯ ಬೆಳವಗಿ ಗ್ರಾಮದ ನಿವಾಸಿ ಕೂಡ್ಲಿಗೆರೆಯಲ್ಲಿ ದಾವಣಗೆರೆಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ಅವರಿಗೆ ಶಾಲಾವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಶಾಲಾ ವಾಹನದ ಟೈರ್​ಗೆ ಸಿಲುಕಿ ವಿಶ್ವನಾಥ್​ ಮೃತಪಟ್ಟಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor