ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಟೂರಿಸ್ಟ್ ಬಸ್ ಪಲ್ಟಿ! ಓರ್ವರ ಸಾವು/ 20 ಕ್ಕೂ ಹೆಚ್ಚು ಮಂದಿಗೆ ಗಾಯ!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 24, 2023 GOOGLE NEWS


ಸಿಗಂದೂರು/ ಸಾಗರ/ ಶಿವಮೊಗ್ಗ  ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಟೂರಿಸ್ಟ್​ ಬಸ್​ವೊಂದು ಪಲ್ಟಿಯಾಗಿದೆ. 

ಘಟನೆಯಲ್ಲಿ ಓರ್ವ ವೃದ್ದೆ ಸಾವನ್ನಪ್ಪಿರುವಾಗಿದೆ ತಿಳಿದುಬಂದಿದೆ. ಇಲ್ಲಿನ ಸಂಕಣ್ಣ ಶಾನುಬೋಗ್​ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸಕೊಪ್ಪ ತಿರುವಿನಲ್ಲಿ ಘಟನೆ ಸಂಭವಿಸಿದೆ. 

ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್ ರಸ್ತೆ ಪಕ್ಕ ಇಳಿಜಾರಿನಲ್ಲಿದ್ದ ತೋಟಕ್ಕೆ ಉರುಳಿಸಿದೆ. 

ಚಾಲಕ ನಿದ್ರೆ ಮಂಪರಿನಲ್ಲಿದ್ದಿದ್ದು ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ತಿರುವಿನಲ್ಲಿ ವಾಹನದ ವೇಗವೂ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಘಟನೆಯ ಸುಮಾರು 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಅವರನ್ನ ರವಾನಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ಧಾರೆ.   

ಮಿನಿ ಬಸ್ ನಲ್ಲಿ ಬೆಂಗಳೂರು ದೇವನಹಳ್ಳಿ ಮೂಲದ ನಿವಾಸಿಗಳು ಪ್ರಯಾಣಿಸ್ತಿದ್ದು, ಕೊಲ್ಲೂರಿಗೆ ಹೋಗಿ ಅಲ್ಲಿಂದ ಸಿಗಂದೂರಿಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. 

ತರಿಕೆರೆಯಲ್ಲಿ ಎರಡು ಬಸ್​ಗಳ ನಡುವೆ ಡಿಕ್ಕಿ

ತರಿಕೆರೆ/ ಚಿಕ್ಕಮಗಳೂರು/  ಇಲ್ಲಿನ  ಹಳಿಯೂರು ಸಮೀಪ ಆಕ್ಸಿಡೆಂಟ್ ಸಂಭವಿಸಿದೆ. ಎರಡು ಕೆ.ಎಸ್​.ಆರ್​.ಟಿ.ಸಿ (KSRTC)ಬಸ್​ಗಳು ಮುಖಾಮುಖಿ ಡಿಕ್ಕಿಯಾಗಿವೆ. 

ಇವತ್ತು ಬೆಳಗ್ಗೆ ಸಂಭವಿಸಿರುವ ಘಟನೆಯಲ್ಲಿ ಬೆಂಗಳೂರು-ಹೆಗ್ಗೋಡು ನಾನ್ ಎಸಿ ಸ್ಲೀಪರ್​ ಬಸ್ ಹಾಗೂ , ರಾಜ್ಯ ಸಾರಿಗೆಯ ಸಾಮಾನ್ಯ ಬಸ್ ಡಿಕ್ಕಿಯಾಗಿದೆ

ಹೈವೆಯಲ್ಲಿಯೇ ಈ ಘಟನೆ ಸಂಭವಿಸಿದೆ, ಆಕ್ಸಿಡೆಂಟ್ (Accident) ನಲ್ಲಿ 16 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನ ತರಿಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ, ಅದೃಷ್ಟವಶಾತ್ ಯಾವುದೆ ಪ್ರಾಣಪಾಯ ಸಂಭವಿಸಿಲ್ಲ. 

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor