ಸುಲಿಗೆ ಕೇಸ್​ನಲ್ಲಿ ಆರಾಮಾಗಿದ್ದ ಆರೋಪಿಗಳಿಗೆ ಶಾಕ್ ಕೊಟ್ಟ ತುಂಗಾ ನಗರ ಪೊಲೀಸ್ ! ಒಂದೇ ಸಲಕ್ಕೆ 10 ಕೇಸ್​ ಇತ್ಯರ್ಥ

ಹಂಚಿಕೊಳ್ಳಿ
WhatsApp Facebook X Telegram
ಸುಲಿಗೆ ಕೇಸ್​ನಲ್ಲಿ ಆರಾಮಾಗಿದ್ದ ಆರೋಪಿಗಳಿಗೆ ಶಾಕ್ ಕೊಟ್ಟ ತುಂಗಾ ನಗರ ಪೊಲೀಸ್ ! ಒಂದೇ ಸಲಕ್ಕೆ 10 ಕೇಸ್​ ಇತ್ಯರ್ಥ

SHIVAMOGGA  |  Jan 24, 2024  |      ಶಿವಮೊಗ್ಗ ತುಂಗಾನಗರ ಪೊಲೀಸ್ ಸ್ಟೇಷನ್​ ಲಿಮಿಟ್​ನಲ್ಲಿ ದಾಖಲಾಗಿದ್ದ  ಸುಲಿಗೆ ಪ್ರಕರಣಗಳ ಇತ್ಯರ್ಥಕ್ಕೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್​ ವಿಶೇಷ ತನಿಖಾ ತಂಡ ರಚಿಸಿದ್ದರು. 

ಈ ತಂಡದಲ್ಲಿ ಮಂಜುನಾಥ್.ಬಿ, ಪಿಐ ತುಂಗಾನಗರ ಪೊಲೀಸ್ ಠಾಣೆ, ಶಿವಪ್ರಸಾದ್ ವಿ. ಪಿಎಸ್ಐ, ಮಂಜುನಾಥ್ ಪಿ.ಎಸ್.ಐ,  , ರಘುವೀರ್ ಎಮ್ ಪಿ.ಎಸ್.ಐ,  , ಕುಮಾರ ಕೂರಗುಂದ  ಪಿ.ಎಸ್.ಐ,  ದೂದ್ಯಾನಾಯ್ಕ ಪಿ.ಎಸ್.ಐ,  ,ಮನೋಹರ್ ಎ.ಎಸ್.ಐ, ಮತ್ತು  ಸಿಬ್ಬಂದಿಗಳಾದ ಹೆಚ್ಸಿ ಕಿರಣ್ ಮೋರೆ, ಅರುಣ್ ಕುಮಾರ, ಮೋಹನ್ ಕುಮಾರ್, ಪುನೀತ, ಸಿಪಿಸಿ ನಾಗಪ್ಪ ಅಡಿವೆಪ್ಪನವರ್, ಹರೀಶ್ ನಾಯ್ಕ, ಲಂಕೇಶ್ ಕುಮಾರ್, ಕಾಂತರಾಜ್, ಅರಿಹಂತ ಶಿರಹಟ್ಟಿ, ಹರೀಶ್ ಎಮ್.ಜಿ, ರವರಗಳು ಇದ್ದರು. 

ಸದ್ಯ ಈ ತಂಡ ತಮಗೆ ವಹಿಸಿದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ಸುಮಾರು ಆರು ಲಕ್ಷ ಮೌಲ್ಯದ ಸುಲಿಗೆಯಾದ ವುಸ್ತು, ಹಣವನ್ನು ಜಪ್ತು ಮಾಡಿದೆ ಅಲ್ಲದೆ ಈ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳು 10 ಪ್ರಕರಣಗಳಲ್ಲಿ ಪೊಲೀಸರ ವಾಂಟೆಡ್ ಲಿಸ್ಟ್​ ನ್ಲಲಿದ್ದವರು.  

ತುಂಗಾನಗರ ಪೊಲೀಸ್ ಸ್ಟೇಷನ್ 

1) ಮಹಮದ್ ತಬರಕ್ ವುಲ್ಲಾ @ ತಪ್ಪಣ್ಣ, 22 ವರ್ಷ, ಕೆಳಗಿನ ತುಂಗಾನಗರ, ಶಿವಮೊಗ್ಗ 

2) ಸೈಯದ್ ಹುಸೇನ್ @ ಶೇಟಾ, 23 ವರ್ಷ,  ಕೆಳಗಿನ ತುಂಗಾನಗರ ಬಂಧಿತ ಆರೋಪಿಗಳು

ಈ ಆರೋಪಿಗಳಿಂದ  ತುಂಗಾನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 03 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು, 02 ಸುಲಿಗೆ ಪ್ರಕರಣಗಳು, 02 ಮನೆಗಳ್ಳತನ ಪ್ರಕರಣಗಳು,  ಜಯನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ಸುಲಿಗೆ ಪ್ರಕರಣ, ವಿನೋಬನಗರ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ಸುಲಿಗೆ ಪ್ರಕರಣ ಮತ್ತು ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ವರದಿಯಾದ 01 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿದಂತೆ 

ಒಟ್ಟು 10 ಪ್ರಕರಣಗಳಿಗೆ ಸಂಬಂಧಿಸಿದ 1) ಅಂದಾಜು ಮೌಲ್ಯ 4,18,000/- ರೂಗಳ 76 ಗ್ರಾಂ ತೂಲದ ಬಂಗಾರದ ಆಭರಣಗಳು, 2) ಅಂದಾಜು ಮೌಲ್ಯ 10,000/- ರೂಗಳ ಮೊಬೈಲ್ ಫೋನ್ 3) ಅಂದಾಜು ಮೌಲ್ಯ 1,50,000/- ರೂಗಳ 04 ದ್ವಿಚಕ್ರ ವಾಹನಗಳು ಮತ್ತು 4) 14,370/- ರೂ ನಗದು ಹಣ ಸೇರಿ ಒಟ್ಟು 5,92,370/- ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.  


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor