ಹೊಟ್ಟೆನೋವಿಗೆ ಆಸ್ಪತ್ರೆ ಸೇರಿದ ಬಾಲಕಿಯಿಂದ ಮಗುವಿಗೆ ಜನ್ಮ! ಕುಡಿಯನ್ನ ಕೊಂದು ಪರಾರಿ! ವೈದ್ಯರ ನಿರ್ಲಕ್ಷ್ಯ!?

ಹಂಚಿಕೊಳ್ಳಿ
WhatsApp Facebook X Telegram
ಹೊಟ್ಟೆನೋವಿಗೆ ಆಸ್ಪತ್ರೆ ಸೇರಿದ ಬಾಲಕಿಯಿಂದ ಮಗುವಿಗೆ ಜನ್ಮ! ಕುಡಿಯನ್ನ ಕೊಂದು ಪರಾರಿ! ವೈದ್ಯರ ನಿರ್ಲಕ್ಷ್ಯ!?

SHIVAMOGGA NEWS / ONLINE / Malenadu today/ Nov 23, 2023 NEWS KANNADA

Chikkamagaluru |  Malnenadutoday.com |  ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ಹುಟ್ಟಿದ ಮಗುವೊಂದು ಧಾರುಣವಾಗಿ ಬಲಿಯಾದ ಘಟನೆ ನಡೆದಿದೆ. 

ಚಿಕ್ಕಮಗಳೂರು ಜಿಲ್ಲೆ ತಾಲ್ಲೂಕಿನ ಆಸ್ಪತ್ರೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಹೊಟ್ಟೆನೋವು ಎಂದು ಅಡ್ಮಿಟ್ ಆಗಿದ್ದಾಳೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೇಲ್ನೋಟಕ್ಕೆ ಚಿಕಿತ್ಸೆಯನ್ನ ಆರಂಭಿಸಿದ್ದಾರೆ. ಬಾಲಕಿಯ ಹೊಟ್ಟೆನೋವಿಗೆ ಕಾರಣ ಏನು ಎಂದು ಅರಿಯುವ ಪ್ರಯತ್ನವನ್ನೆ ಮಾಡಿಲ್ಲ ಎಂದು ಕಾನೂನಾತ್ಮಕ ಸಂಸ್ಥೆಗಳ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. 

READ : ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮನೆಮುಂದೆ ಬಿತ್ತು ಕುಂಬಳಕಾಯಿ, ನಿಂಬೆಹಣ್ಣು, ಕುಂಕುಮ! ವಾಮಚಾರ?

ಈ ಮಧ್ಯೆ 16 ರ ಬಾಲಕಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಒಂಬತ್ತು ತಿಂಗಳ ಗರ್ಭಿಣಿಯಾಗಿ ಬಾಲಕಿ ಆಸ್ಪತ್ರೆಗೆ ಬಂದಿದ್ದಾಳೆ. ಆಕೆಯ ಹೊಟ್ಟೆನೋವಿಗೆ ಕಾರಣ ತಿಳಿಯದ ವೈದ್ಯರು ಅಪ್ರಾಪ್ತ ಪ್ರಕರಣದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ಮಾಡಿಲ್ಲ. ಇದರ ನಡುವೆ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. 

ಇನ್ನೊಂದೆಡೆ, ಅಪ್ರಾಪ್ತೆ ತನ್ನ ನವಜಾತ ಶಿಶುವನ್ನ ಕೊಂದು ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ ಎಂಬ ವರದಿ ಬಂದಿದ್ದು, ಸದ್ಯ ಪ್ರಕರಣ ಸಂಬಂಧ ಪೊಲೀಸರ ಪ್ರವೇಶವಾಗಿದೆ. ವೈದ್ಯರು ಹಾಗೂ ಸರ್ಕಾರಿ ಸಂಸ್ಥೆಗಳ ನಿರ್ಲಕ್ಷ್ಯದಿಂದ ಇಡೀ ಪ್ರಕರಣದಲ್ಲಿ ನವಜಾತ ಶಿಶು ಸಾವನ್ನಪ್ಪಿದೆ.. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor