ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ಸದ್ಯ ಬಿಗ್ ಬಿಲಿಯನ್ ಸೇಲ್ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಫ್ಲಿಫ್ ಕಾರ್ಟ್ ಭರ್ಜರಿ ಆಫರ್ ನೀಡುತ್ತಿದೆ. Flipkart Big Billion Days 2025 ರ ಹಿನ್ನೆಲೆಯಲ್ಲಿ ಐಫೋನ್ 16 ಮತ್ತು ಐಫೋನ್ 16 ಪ್ರೊ ಸರಣಿಯನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿವೆ. Flipkart ನೀಡುತ್ತಿದೆ. ಸೆಪ್ಟೆಂಬರ್ 23 ಅಂದರೆ ಇವತ್ತಿನಿಂದಲೇ ಈ ಆಫರ್ ಆರಂಭವಾಗಿದೆ. ಕಡಿಮೆ ಬೆಲೆ, ಬ್ಯಾಂಕ್ ಇಎಂಇ, ಕ್ಯಾಶ್ ಬ್ಯಾಕ್ ಹಾಗೂ ಎಕ್ಸ್ಚೇಂಜ್ ಆಪ್ಶನ್ನೊಂದಿಗೆ ಫ್ಲಿಫ್ಕಾರ್ಟ್ ಬಿಗ್ ಬಿಲಿಯನ್ ಡೇ ಗಿಫ್ಟ್ ನೀಡುತ್ತಿದೆ. ವಿಶೇಷವಾಗಿ ಆಕ್ಸಿಸ್ ಬ್ಯಾಂಕ್ ಅಥವಾ ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೆಚ್ಚಿನ ರಿಯಾಯಿತಿ ಸಿಗ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 16 ಪ್ರೊ
128GB ಸಂಗ್ರಹ ಸಾಮರ್ಥ್ಯ ಮತ್ತು ನ್ಯಾಚುರಲ್ ಟೈಟಾನಿಯಂ ಫಿನಿಶ್ ಹೊಂದಿರುವ ಐಫೋನ್ 16 ಪ್ರೊ, ಫ್ಲಿಪ್‌ಕಾರ್ಟ್‌ನಲ್ಲಿ ರೂ. 1,19,900 ಗೆ ಲಭ್ಯವಿದೆ. ಎಕ್ಸ್ಚೇಂಜ್ ಆಫರ್ನಲ್ಲಿ ಫೋನ್ ಅನ್ನು ಅಗ್ಗದ ದರದಲ್ಲಿ ಪಡೆಯಬಹುದು. ಉತ್ತಮ ಸ್ಥಿತಿಯಲ್ಲಿರುವ ಐಫೋನ್ 15 ಪ್ರೊ ಅನ್ನು ವಿನಿಮಯ ಮಾಡಿಕೊಂಡರೆ, ಖರೀದಿದಾರರಿಗೆ ರೂ. 37,900 ರವರೆಗೂ ರಿಯಾಯಿತಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ. ಮತ್ತು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ 4,000 ರೂಪಾಯಿ ಡಿಸ್ಕೌಂಟ್ ನೀಡುತ್ತಿದೆ.
ಐಫೋನ್ 16 ಪ್ರೊ 48MP ಫ್ಯೂಷನ್ ಕ್ಯಾಮೆರಾ ಮತ್ತು ಸೆಕೆಂಡ್ ಜನರೇಶನ್ ಕ್ವಾಡ್-ಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದು 4K120 ವಿಡಿಯೋ ರೆಕಾರ್ಡಿಂಗ್‌ಗೆ ಅವಕಾಶ ಇದೆ. ಆಟೋಫೋಕಸ್ ಹೊಂದಿರುವ 48MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 5x ಟೆಲಿಫೋಟೋ ಲೆನ್ಸ್ ಸಹ ಇದರಲ್ಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
