ರಾಜ್ಯದಲ್ಲಿ ಮತ್ತೊಂದು ಆ*…ವಿಡಿಯೋ ಪ್ರಕರಣ!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 23 2025 : ಈ ಹಿಂದೆ 2000 ಕ್ಕೂ ಅಶ್ಲೀಲ ವಿಡಿಯೋ ಹೊಂದಿದ್ದರು ಎನ್ನಲಾದ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಜೈಲು ಸೇರಿದ್ದರು. ಅಲ್ಲದೆ ಇದೇ ವಿಚಾರದಲ್ಲಿ ದಾಖಲಾದ ಒಂದು ಪ್ರಕರಣದಲ್ಲಿ ಪ್ರಜ್ವಲ್​ಗೆ ಶಿಕ್ಷೆ ಕೂಡ ಆಗಿದೆ. ಇನ್ನೂ ಸದ್ಯ ಅದೇ ಮಾದರಿಯ ಆರೋಪವೊಂದು ಸಂತ್ರಸ್ತ ಮಹಿಳೆಯಿಂಧ ಕೇಳಿಬಂದಿದೆ. ದೈಹಿಕ ಶಿಕ್ಷಕನೊಬ್ಬನ ಬಳಿ  2500 ಅಶ್ಲೀಲ ವಿಡಿಯೋ ಇದೆ ಎಂದು ಆತನಿಂದ ಸಮಸ್ಯೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ  ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ ಎಂದು ಸ್ಟೇಟ್​ ಮೀಡಿಯಾಗಳು ವರದಿ ಮಾಡಿವೆ. ವರದಿ ಪ್ರಕಾರ, ದೈಹಿಕ ಶಿಕ್ಷಕನನ್ನು ಮದುವೆಯಾಗಿದ್ದು, ಆನಂತರ ಆತನಿಂದ ಕಿರುಕುಳಕ್ಕೆ ಒಳಗಾಗಿದ್ದಾಳೆ. ಅಲ್ಲದೆ ಆತನ ಮೊಬೈಲ್​ನಲ್ಲಿ ಹಲವು ಮಹಿಳೆಯರ ವಿಡಿಯೋಗಳಿವೆ ಎಂದು ದೂರಿದ್ದಾಳೆ. ಸದ್ಯ ಈ ಸಂಬಂಧ ತನಿಖೆ ನಡೆಯುತ್ತಿದೆ. 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Teacher Accused of Hoarding that Videos

Leave a Comment