ರಸ್ತೆ ದಾಟುತ್ತಿದ್ದ ಯುವಕನ ಮೇಲೆ ಕಾರು-ಜೀಪ್​ನಲ್ಲಿ ಬಂದವರಿಂದ ಹಲ್ಲೆ! ಏನಿದು ತೀರ್ಥಹಳ್ಳಿಯಲ್ಲಿ ಘಟನೆ!

KARNATAKA NEWS/ ONLINE / Malenadu today/ Aug 28, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕೈಮರ ಸಮೀಪ ನಿನ್ನೆ ಮುಸ್ಸಂಜೆಯ ಹೊತ್ತಿನಲ್ಲಿ ರಸ್ತೆ ದಾಟುತ್ತಿದ್ದ ಯುವಕನೊಬ್ಬನ ಮೇಲೆ ಎರಡು ವಾಹನದಲ್ಲಿದ್ದವರು ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಸಚಿನ್ ಎಂಬವರಿಗೆ ತೀವ್ರ ಪೆಟ್ಟಾಗಿದ್ದು, ಅವರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಲ್ಮನೆ ಸಮೀಪದಲ್ಲಿ ಕೋಳಿಪಾರಂಗೆ ಹೋಗಲು ಸಚಿನ್ ಎಂಬವರು ರಸ್ತೆ ದಾಟುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಜಿಪ್ಸಿಯೊಂದು ಅಲ್ಲಿಗೆ ಬಂದಿದೆ. ಅವರಿಗೆ ತಾನು ರಸ್ತೆ ದಾಟುತ್ತಿರುವುದು ಗೊತ್ತಾಗಲಿ ಎಂದು ಸಚಿನ್ ಕೈ ಅಡ್ಡ ತೋರಿಸಿದ್ಧಾರೆ. ಸ್ಥಳೀಯರು ಹೇಳುವಂತೆ ನಡೆದಿದ್ದು ಇಷ್ಟು. ಇದೇ ವಿಚಾರಕ್ಕೆ ಜೀಪ್ ನಿಲ್ಲಿಸಿ, ಅದರಲ್ಲಿದ್ದವರು , ಸಚಿನ್​ನನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೇ ಅಲ್ಲಿಗೆ ಬಂದ ನೆಕ್ಸಾ ಕಾರಿನಲ್ಲಿದ್ದವರು ಕೂಡ ಸಚಿನ್​ಗೆ ಹಲ್ಲೆ ಮಾಡಿದ್ದಾರೆ. ಎರಡು ವಾಹನಗಳಲ್ಲಿದ್ದವರು ಒಂದೇ ಕಡೆಯವರು ಎನ್ನಲಾಗಿದ್ದು, ಕುಡಿದು ಮತ್ತಿನಲ್ಲಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ಹಲ್ಲೆ ಮಾಡಿದವರು ನೆರೆಯ ಜಿಲ್ಲೆಯವರು ಎಂದು ಹೇಳಲಾಗುತ್ತಿದ್ದು,  ಘಟನೆ ಬೆನ್ನಲ್ಲೆ ಆಕ್ರೋಶಗೊಂಡ ಸ್ಥಳೀಯರು ತೀರ್ಥಹಳ್ಳಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಅಲರ್ಟ್ ಆದ ಪೊಲೀಸರು, ಎರಡು ವಾಹನಗಳನ್ನು ಟ್ರೇಸ್ ಮಾಡಿ ಅಡ್ಡಗಟ್ಟಿ ಸ್ಟೇಷನ್​ಗೆ ಕರೆತಂದು  ವಿಚಾರಣೆ ನಡೆಸಿದ್ದಾರೆ.   


ಇನ್ನಷ್ಟು ಸುದ್ದಿಗಳು 


 

 

Leave a Comment