ಅಡ್ಡ ಬಂದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸುವ ವೇಳೆ ಆಕ್ಸಿಡೆಂಟ್ ! ಪಲ್ಟಿಯಾದ ಬಸ್​ , 25 ಮಂದಿಗೆ ಗಾಯ!

KARNATAKA NEWS/ ONLINE / Malenadu today/ Aug 5, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಉಳ್ಳೂರು ಸಮೀಪ ಅಡ್ಡ ಬಂದ  ಬೈಕ್ಗೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಸ್​ವೊಂದು ರಸ್ತೆ ಪಕ್ಕದ ತಗ್ಗಿಗೆ ಉರುಳಿ ಪಲ್ಟಿಯಾಗಿದೆ. ಘಟನೆಯಲ್ಲಿ 25  ಮಂದಿ ಗಾಯಗೊಂಡಿದ್ದಾರೆ. 

ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್​ವೊಂದು  ಅಡ್ಡ  ಬಂದಿತ್ತು. ಇದನ್ನ   ತಪ್ಪಿಸಲು ಹೋದಾಗ ಬಸ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ರಸ್ತೆಯ ಪಕ್ಕದಲ್ಲಿ ಮಣ್ಣಿನ ದಿಬ್ಬ ಇದ್ದಿದ್ದರಿಂದ ಭಾರಿ ಅವಘಡ ತಪ್ಪಿದೆ. ಇನ್ನೂ ಘಟನೆಯಲ್ಲಿ ಬೈಕ್​ ಸವಾರನು ಬಿದ್ದಿದ್ದು, ಘಟನೆ ನೋಡಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ. 

 

ಬಸ್‌ನಲ್ಲಿದ್ದ 27 ಪ್ರಯಾಣಿಕರ ಪೈಕಿ 25 ಜನರಿಗೆ ಗಾಯಗಳಾಗಿವೆ. 4 ಜನರನ್ನು ಶಿವಮೊಗ್ಗಾದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.  ಬಸ್‌ಚಾಲಕ ಸಣ್ಣಪ್ಪ ಗಾಣಿಗೆರ ಅವರ ತಲೆಗೆ ಪೆಟ್ಟಾಗಿದ್ದು ನಿರ್ವಾಹಕ ಗೌಡಪ್ಪ ಅವರ ಕೈ ಮುರಿದಿದೆ. 


ನಾಗೋಡಿ ಬಳಿ ವಿದ್ಯುತ್​ ಕಂಬಕ್ಕೆ ಗುದ್ದಿದ ತಮಿಳುನಾಡಿನ ಟೂರಿಸ್ಟ್​ ಬಸ್​! ವಾರದಲ್ಲಿ ಎರಡನೇ ಘಟನೆ!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು  ನಿಟ್ಟೂರು ಸಮೀಪ ನಿನ್ನೆ ಬಸ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಕೆಲದಿನಗಳ ಹಿಂದ ಸಾಗರ ತಾಲ್ಲೂಕಿನ ಗೆಣಸಿನಕುಣಿ ಬಳಿಯಲ್ಲಿ ಖಾಸಗಿ ಬಸ್​ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಯಾಗಿತ್ತು. ಪರಿಣಾಮ ಕರೆಂಟ್​ ವಯರ್​ ಬಸ್ ಮೇಲೆಯೆ ಬಿದ್ದಿತ್ತು. ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. 

ಇದರ ಬೆನ್ನಲ್ಲೆ ನಿನ್ನೆ  ನಿಟ್ಟೂರು ಸಮೀಪ ನಾಗೋಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ತಮಿಳುನಾಡಿನ ವಂದವಾಸಿಯಿಂದ ಬಂದಿದ್ದ ಬಸ್​ ಹುಂಚಾದ ಮೂಲಕ ಸಾಗಿ ಕೊಲ್ಲೂರು ಕಡೆಗೆ ಹೋಗುತ್ತಿತ್ತು. ದನವೊಂದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಬಸ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ . ಅದೃಷ್ಟಕ್ಕೆ ಯಾವುದೇ ಅಪಾಯ ಸಂಭವಿಸಲಿಲ್ಲ. ಬಸ್​ನಲ್ಲಿ 51 ಜನರಿದ್ದರು. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನಷ್ಟು ಸುದ್ದಿಗಳು 

 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

Leave a Comment