WhatsApp chats evidence 22 / ಸ್ಪೈ ಆಪ್​ ಮೂಲಕ ಪತ್ನಿಯ ವಾಟ್ಸಾಪ್ ನಿಂದ ಕದ್ದ ಚಾಟ್​ ಡಿವೋರ್ಸ್​ ಕೇಸ್​ಗಾಯ್ತು ಸಾಕಲ್ಷ

ಹಂಚಿಕೊಳ್ಳಿ
WhatsApp Facebook X Telegram
WhatsApp chats evidence
WhatsApp chats evidence

WhatsApp chats evidence  ಡಿವೋರ್ಸ್ ಕೇಸ್​ನಲ್ಲಿ ಸ್ಪೈ ಆ್ಯಪ್ ಮೂಲಕ ಪಡೆದ ವಾಟ್ಸಾಪ್ ಚಾಟ್​ಗಳು ಸಾಕ್ಷ್ಯ

WhatsApp chats evidence  Malenadutoday: ಪತ್ನಿಯ ಅನುಮತಿಯಿಲ್ಲದೆ ಪಡೆದ ಆಕೆಯ ಖಾಸಗಿ ವಾಟ್ಸಾಪ್ ಚಾಟ್​ಗಳನ್ನು ಸಹ ಕೌಟುಂಬಿಕ ನ್ಯಾಯಾಲಯ ಕಾಯ್ದೆಯಡಿ ವಿಚ್ಛೇದನ ಪ್ರಕರಣಗಳಲ್ಲಿ ಸಾಕ್ಷ್ಯವಾಗಿ ಬಳಸಬಹುದು ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ವ್ಯಭಿಚಾರದ ಆರೋಪಗಳನ್ನೊಳಗೊಂಡ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದ್ದು,  ಗೌಪ್ಯತೆ ಹಕ್ಕುಗಳ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.

WhatsApp chats evidence
WhatsApp chats evidence

ವಿಚ್ಛೇದನ ಪ್ರಕರಣವೊಂದರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ವಿವರ ಗಮನಿಸುವುದಾದರೆ,  ಪತಿಯು ಪತ್ನಿಯ ಫೋನ್​ಗೆ ಸ್ಪೈ ಆ್ಯಪ್ ಹಾಕಿ ಆಕೆಯ ಖಾಸಗಿ ವಾಟ್ಸಾಪ್ ಚಾಟ್​ಗಳನ್ನು ಪಡೆದಿದ್ದ. ಆ ಚಾಟ್​ಗಳಲ್ಲಿ ಆಕೆ ಅನೈತಿಕ ಸಂಬಂಧ ಹೊಂದಿದ್ದ ವಿಷಯ ತಿಳಿದುಬಂದಿತ್ತು. ಈ ಸಾಕ್ಷ್ಯವನ್ನು ವಿಚ್ಚೆದನ ಪ್ರಕರಣದಲ್ಲಿ ಪತಿಯ ಕಡೆಯ ವಕೀಲರು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಿದ್ದಾರೆ. ಅಲ್ಲದೆ ಕ್ರೌರ್ಯ ಹಾಗೂ ವ್ಯಭಿಚಾರದ ಗ್ರೌಂಡ್ಸ್​ ಮೇಲೆ ವಿಚ್ಛೇದನ ಕೋರಿದರು. 

WhatsApp chats evidence

ಪತ್ನಿಯ ವಕೀಲರು ಇದನ್ನು ವಿರೋಧಿಸಿದರಷ್ಟೆ ಅಲ್ಲದೆ ಪತಿಯ ಈ ಕ್ರಮ ಭಾರತದ ಸಂವಿಧಾನದ 21ನೇ ವಿಧಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 43, 66 ಮತ್ತು 72ರ ಅಡಿಯಲ್ಲಿ ಆಕೆಗೆ ಸಿಗಬೇಕಾದ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು. 

ಅಂತಿಮವಾಗಿ ಮಧ್ಯಪ್ರದೇಶ ಹೈಕೋರ್ಟ್ ಪ್ರಕರಣದಲ್ಲಿ ಪತ್ನಿಯ ಪರವಾದ ವಾದವನ್ನು ತಳ್ಳಿಹಾಕಿತು. ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದ್ದರೂ, ಇದಕ್ಕೆ ವಿನಾಯಿತಿಗಳು ಮತ್ತು ಮಿತಿಗಳಿವೆ ಎಂದು ನ್ಯಾಯಾಲಯ ಹೇಳಿದೆ. ಸದ್ಯ ಈ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.

WhatsApp chats  obtained through spy app are evidence in divorce case

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor